SCIENTISTS & MATHEMATICIANS

 

ಸಿ. ವಿ. ರಾಮನ್ ಎಂಬ ದಂತಕತೆ 

ಲೇಖಕರು : ಎಸ್ ಹರ್ಷ

ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಡತಲೆ, ನಂಜನಗೂಡು ತಾ., ಮೈಸೂರು


 ತಮಿಳುನಾಡಿನ ಮದ್ರಾಸ್ ಪ್ರಾಂತ್ಯದ ತಿರುಚನಾಪಳ್ಳಿಯ ತಿರುವಾನೈಕೋಯಿಲ್ ಎಂಬಲ್ಲಿ ಚಂದ್ರಶೇಖರ ಮತ್ತು ಪಾರ್ವತಿ ಅಮ್ಮಾಳ್ ಎಂಬ ದಂಪತಿಗಳ ಪುತ್ರನಾಗಿ ಜನಿಸಿದ ರಾಮನ್ ರವರು ತಮ್ಮ 12 ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ 1904 ರಲ್ಲಿ ಬಿ.ಎಸ್ಸಿ. ನಂತರ ರಲ್ಲಿ 1907ರಲ್ಲಿ ಎಂ.ಎಸ್ಸಿ. ಪದವಿಯನ್ನು ಗಳಿಸಿದರು. 1907ರಲ್ಲಿ ಲೋಕಸುಂದರಿ ಅಮ್ಮಾಳ್ ರೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.1924 ರಲ್ಲಿ ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ, 1929 ರಲ್ಲಿ ನೈಟ್ ಹುಡ್ ಪ್ರಶಸ್ತಿ, 1930 ರಲ್ಲಿ ನೊಬೆಲ್ ಪುರಸ್ಕಾರ, 1954 ರಲ್ಲಿ ಭಾರತರತ್ನ ಪ್ರಶಸ್ತಿಗಳು ಅರಸಿ ಬಂದವು.

    28-02-1928 ರಂದು ರಾಮನ್ ರವರು ರಾಮನ್ ಪರಿಣಾಮ’ ವನ್ನು ಲೋಕಾರ್ಪಣೆ ಮಾಡಿದರು. ಇದರ ನೆನಪಿಗಾಗಿ 1986 ರಿಂದ ಪ್ರತೀ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಆಚರಿಸಲಾಗುತ್ತಿದೆ. ಈ ಸಂಶೋಧನೆಗಾಗಿ 1930 ರಲ್ಲಿ ರಾಮನ್ ರವರಿಗೆ ನೊಬೆಲ್ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.

ರಾಮನ್ ಚದುರುವಿಕೆ / ರಾಮನ್ ಪರಿಣಾಮ (RAMAN SCATTERING/ RAMAN EFFECT)

    ಟಿಂಡಾಲ್ ಮತ್ತು ರ‍್ಯಾಲೇಯವರಂತೆ ರಾಮನ್ ರವರು ಬೆಳಕಿನ ಚದುರಿಕೆಯ ವಿದ್ಯಮಾನವನ್ನು ಅಧ್ಯಯನ ಮಾಡಿದರು. ಪ್ರಯೋಗಗಳನ್ನು ನಡೆಸಿ, ಅವುಗಳ ಆಧಾರದ ಮೇಲೆ ಬೆಳಕಿನ ಚದುರಿಕೆಯ ಬಗ್ಗೆ 1928 ರಲ್ಲಿ ಕೆಲವು ನಿರ್ಧಾರಗಳನ್ನು ನೀಡಿದರು.  ಇದನ್ನು ರಾಮನ್ ಚದುರಿಕೆ ಅಥವಾ ರಾಮನ್ ಪರಿಣಾಮ ಎನ್ನುವರು.

    ರ‍್ಯಾಲೇ ರವರು ತಮ್ಮ ಬೆಳಕಿನ ಚದುರಿಕೆ ಪ್ರಯೋಗದಲ್ಲಿ ಆಕಾಶ ನೀಲಿಯಾಗಿ ಕಾಣಲು ಬೆಳಕಿನ ಚದುರಿಕೆ ಕಾರಣ ಎಂದು ಪ್ರತಿಪಾದಿಸಿದ್ದರು.  ಸೂರ್ಯನಿಂದ ಹೊರಟ ಬೆಳಕು, ವಾತಾವರಣದಲ್ಲಿ ಇರುವ ಗಾಳಿಯ ಕಣಗಳನ್ನು ತಾಡಿಸಿ ಚದುರುತ್ತದೆ.  ಆದರೆ ಚದುರಿದ ನಂತರವೂ ಸಹ ಬೆಳಕಿನ ತರಂಗದ ಶಕ್ತಿಯಲ್ಲಾಗಲೀ, ಬೆಳಕಿನ ತರಂಗದ ಕಂಪನದಲ್ಲಾಗಲೀ ವ್ಯತ್ಯಯವಾಗುವುದಿಲ್ಲ ಎಂದು ತಿಳಿಸಿದ್ದರು. 

    ಆಕಾಶ ನೀಲಿಯಾಗಿಯೇ ಏಕೆ ಗೋಚರಿಸುತ್ತದೆ? ಎನ್ನುವುದಕ್ಕೆ ರ‍್ಯಾಲೇ ರವರು ಬೆಳಕಿನ ಚದುರಿಕೆಯು ಬೆಳಕಿನ ಆವೃತ್ತಿಯ ನಾಲ್ಕರ ಘಾತದ ಮೇಲೆ ಅವಲಂಭಿತವಾದ್ದು, ನೀಲಿ ಬಣ್ಣದ ಆವೃತ್ತಿ ಹೆಚ್ಚಾಗಿರುವುದರಿಂದ ಅದು ಬಣ್ಣವೇ ಚದುರಿ, ಆಕಾಶ ನೀಲಿಯಾಗಿ ಗೋಚರಿಸುತ್ತದೆ ಎಂದು ತಿಳಿಸಿದ್ದರು.

    ಆದರೆ ರಾಮನ್ ರವರು ನೀಲಿ ಬಣ್ಣದ ಆವೃತ್ತಿಗಿಂತ ನೇರಳೆ ಮತ್ತು ಬೂದ ಬಣ್ಣಗಳ ಆವೃತ್ತಿಗಳು ಹೆಚ್ಚಾಗಿದ್ದರೂ ನೇರಳೆ ಬಣ್ಣ ಏಕೆ ಚದುರುವುದಿಲ್ಲ? ಮಧ್ಯಾಹ್ನದ ಸೂರ್ಯನೇಕೆ ಹಳದಿಯಾಗಿ ಕಾಣುತ್ತಾನೆ? ಸಂಜೆಯ ಸೂರ್ಯಾಸ್ತವೇಕೆ ಕೆಂಪಾಗಿರುತ್ತದೆ? ಎಂಬ ಪ್ರಶ್ನೆಗಳೊಂದಿಗೆ ತಮ್ಮ ಪ್ರಯೋಗವನ್ನು ಆರಂಭಿಸಿದರು.

1928 ರಲ್ಲಿ ಸಿ.ವಿ. ರಾಮನ್ ರವರು ತಮ್ಮ ಪ್ರಯೋಗದಲ್ಲಿ ಮತ್ತೊಂದು ರೀತಿಯಾದ ಬೆಳಕಿನ ಚದುರಿಕೆಯನ್ನು ಗಮನಿಸಿದರು.  ವಾತಾವರಣದಲ್ಲಿ ಇರುವ ಗಾಳಿಯ ಕಣಗಳಿಂದ ಬೆಳಕು ಚದುರಿದ ನಂತರ, ಚದುರಿನ ಬೆಳಕಿನ ಆವೃತ್ತಿಯು ಪತನ ಬೆಳಕಿನ ಆವೃತ್ತಿಗಿಂತ ವ್ಯತ್ಯಾಸವಾಗಿರುತ್ತದೆ, ಏಕೆಂದರೆ ಬೆಳಕು ಕಣಗಳೊಂದಿಗೆ ತಾಡಿಸಿದಾಗ ಬೆಳಕಿನಲ್ಲಿರುವ ಶಕ್ತಿಯನ್ನು ವಾತಾವರಣದಲ್ಲಿರುವ ಕಣಗಳು ಹೀರಿಕೊಂಡು, ಪತನ ಬೆಳಕಿನ ಶಕ್ತಿಗಿಂತ ಚದುರಿದ ಬೆಳಕಿನ ಶಕ್ತಿಯು ಕಡಿಮೆಯಾಗಬಹುದು ಅಥವಾ ಪ್ರಕ್ರಿಯೆಯು ಮೇಲಿನ ಕ್ರಿಯೆಗೆ ವಿರುದ್ಧ ರೀತಿಯಲ್ಲಿ ಜರುಗಿ ಚದುರಿದ ಬೆಳಕಿನ ಆವೃತ್ತಿಯು ಹೆಚ್ಚಾಗಬಹುದು ಎಂದು ಗುರುತಿಸಿದರು.

    ರಾಮನ್ ಪರಿಣಾಮದ ಪ್ರಕಾರ, ಬೆಳಕು ಯಾವುದಾದರೂ ಕಣಗಳ ನಡುವೆ ಅಥವಾ ಪಾರದರ್ಶಕ ರಾಸಾಯನಿಕಗಳ ಮೂಲಕ ಚಲಿಸುವಾಗ, ಸ್ವಲ್ಪ ಪ್ರಮಾಣದ ಬೆಳಕು ಪತನ ದಿಕ್ಕಿನಿಂದ ವಿಭಿನ್ನ ದಿಕ್ಕಿನೆಡೆಗೆ ಚದುರುತ್ತದೆ.  ಈ ರೀತಿ ಚದುರಿದಾಗ ಪತನ ತರಂಗದ ತರಂಗದೂರಕ್ಕಿಂತ, ಚದುರಿದ ಬೆಳಕಿನ ತರಂಗದ ತರಂಗದೂರದಲ್ಲಿ ವ್ಯತ್ಯಾಸವಾಗುತ್ತದೆ. ಬೆಳಕು ಚಲಿಸುವ ದಿಕ್ಕಿನಲ್ಲಿ ಅಡ್ಡವಿರುವ ಕಣಗಳೊಂದಿಗೆ ತಾಡಿಸಲ್ಪಡುವುದರಿಂದ ಬೆಳಕು ಚದುರಲ್ಪಡುತ್ತದೆ.  ಕಣಗಳೊಂದಿಗೆ ತಾಡಿಸಿದಾಗ ಚದುರಲ್ಪಟ್ಟ ಬೆಳಕಿನಲ್ಲಿರುವ ಶಕ್ತಿಯು ಪತನ ಬೆಳಕಿನ ತರಂಗದ ಮೂಲ ಶಕ್ತಿಯಷ್ಟೇ ಇರಬಹುದು (ರ‍್ಯಾಲೇ ಚದುರಿಕೆ), ಅಥವಾ ಕೆಲವೊಮ್ಮೆ ಮೂಲ ಬೆಳಕಿನ ತರಂಗದ ಶಕ್ತಿಗಿಂತ ವ್ಯತ್ಯಾಸವಾಗಿರಬಹುದು.  ಈ ರೀತಿಯ ಚದುರಿಕೆಯನ್ನು ಅಸಂಸಕ್ತ ಚದುರಿಕೆ ಎನ್ನುವರು.

    ರ‍್ಯಾಲೇ ರವರ ಪ್ರಕಾರ, ಬೆಳಕು ಯಾವುದಾದರೂ ಅಣು ಅಥವಾ ಪರಮಾಣುಗಳಿಂದ ಚದುರಿಸಲ್ಪಟ್ಟಾಗ ಚದುರಿಕೆಯ ನಂತರವೂ ಮೊದಲಿನಷ್ಟೇ ಬೆಳಕಿನ ಶಕ್ತಿ ಮತ್ತು ಆವೃತ್ತಿಗಳು   ಇರುವ ಬೆಳಕಿನ ಕಿರಣಗಳನ್ನು  ಗುರುತಿಸಿದ್ದರು, ಅಂತಹ ಚದುರಿಕೆಯನ್ನು ಸಂಸಕ್ತ ಚದುರಿಕೆ ಎಂದು ಕರೆದರು. ಈ ಚದುರಿಕೆಯಲ್ಲಿ ಆಪಾತ ಬೆಳಕು ಮತ್ತು ಕಣಗಳ ನಡುವೆ ಯಾವುದೇ ರೀತಿಯ ಶಕ್ತಿಯ ವಿನಿಮಯವು ನಡೆಯುವುದಿಲ್ಲ.

    ಆದರೆ ರಾಮನ್ ರವರ ಪ್ರಕಾರ, ಉನ್ನತ ಶಕ್ತಿಯ ಮಟ್ಟಕ್ಕೆ ಉದ್ರೇಕಿಸಲ್ಪಟ್ಟ ಕಣಗಳಿಂದ ಬೆಳಕು ಚದುರಿಸಲ್ಪಟ್ಟಾಗ ಆಪಾತ ಬೆಳಕು ಮತ್ತು ಕಣಗಳ ನಡುವೆ ಶಕ್ತಿಯ ವಿನಿಮಯವು ನಡೆದು, ಚದುರಿದ ಬೆಳಕಿನ ಕಿರಣಗಳಲ್ಲಿ ಮೊದಲಿದ್ದ ಶಕ್ತಿಯ ಪ್ರಮಾಣಕ್ಕಿಂತ ವ್ಯತ್ಯಾಸವಾಗಿರುತ್ತವೆ ಎಂದು ಗುರುತಿಸಿದರು.  ಆದ್ದರಿಂದ ಇಂತಹ ಚದುರಿಕೆಯನ್ನು ಅಸಂಸಕ್ತ ಚದುರಿಕೆ ಎಂದು ಕರೆದರು.

ರಾಮನ್ ಪರಿಣಾಮದಿಂದಾಗುವ ಉಪಯೋಗಗಳು (ಅನ್ವಯಗಳು)

1. ರಾಮನ್  ರೋಹಿತ ದರ್ಶನವನ್ನು ಹಲವಾರು ಅನಿಲ, ದ್ರವ ಮತ್ತು ಘನ ವಸ್ತುಗಳ ವಿಶ್ಲೇಷಣೆಗೆ ಬಳಸಲಾಗುತ್ತದೆ.

2. ಅತ್ಯಂತ ಸಂಕೀರ್ಣವಾದ ಮಾನವನ ಅಂಗಾಶಗಳು ಮತ್ತು ಕೆಲವು ಸೂಕ್ಷ್ಮಜೀವಿಗಳ  ವಿಶ್ಲೇಷಣೆಗೆ ಬಳಸಲಾಗುತ್ತದೆ.

3. ಕೆಲವು ಘನ ವಸ್ತುಗಳಲ್ಲಿ ಉನ್ನತ ಆವೃತ್ತಿಯ ಬೆಳಕನ್ನು ಪತ್ತೆಹಚ್ಚಲು ಬಳಸಲಾಗುತ್ತದೆ. 

4. ಆಪ್ಟಿಕಲ್ ಆಂಪ್ಲಿಫೈಯರ್‍ ಗಳಲ್ಲಿ ರಾಮನ್ ಆಂಪ್ಲಿಫಿಕೇಶನ್ ಅನ್ನು ಬಳಸಲಾಗುತ್ತದೆ.

* * *


ಮಾನವ ಕಂಪ್ಯೂಟರ್ ಶಕುಂತಲಾದೇವಿ

ಲೇಖಕರು :  ಗಿರೀಶ. ಹೆಚ್. ಪಿ. 

ಗಣಿತ ವಿಷಯ ಶಿಕ್ಷಕರು. ಸರ್ಕಾರಿ ಪ್ರೌಢಶಾಲೆ , ಅನುಘಟ್ಟ , ಬೇಲೂರು ತಾಲೂಕು. ಹಾಸನ ಜಿಲ್ಲೆ.

    ನವೆಂಬರ್ 4 , ಗಣಿತ ಲೋಕ ಕಂಡ ಗಣಿತದ ಅಪ್ರತಿಮ ಪ್ರತಿಭೆ, ಗಣಿತ ವಿಷಯವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಸದಾ ಪ್ರೇರಕ ಶಕ್ತಿಯಾಗಿ ನಿಲ್ಲುವ, ಗಣಿತ ಆಸಕ್ತರಿಗೆ ಸದಾ ಹೊಳೆಯುವ ವಜ್ರವಾದ, ಕಂಪ್ಯೂಟರ್‌ಗಳನ್ನೇ ತನ್ನ ಮೇಧಾ ಶಕ್ತಿಯಿಂದ ಮಣಿಸಿದ ಅಪಾರ ತಾರ್ಕಿಕ ಹಾಗೂ ಸಂಖ್ಯಾ ಪಾಂಡಿತ್ಯವನ್ನು ಹೊಂದಿ ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಗಳಿಸಿದ ಭಾರತೀಯ ಗಣಿತ ಶಾಸ್ತçಜ್ಞೆ ಶಕುಂತಲಾ ದೇವಿಯವರ ಜನ್ಮ ದಿನ . ಇದರ ಅಂಗವಾಗಿ ವಿಶೇಷ ಲೇಖನ. “ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ”.

    ಅದೊಂದು ದಿನ ¯ಂಡನ್ನಿನ ಇಂಪೀರಿಯರ್ ಕಾಲೇಜ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಸಾವಿರಾರು ಜನ ಒಂದು ಅದ್ಭುತ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಅದು ಗಣಿತ ವಿಷಯದಲ್ಲಿ ಗಿನ್ನಿಸ್ ದಾಖಲೆಯೊಂದು ನಿರ್ಮಾಣವಾಗಬಹುದಾಗಿದ್ದ ರಸಗಳಿಗೆಗಾಗಿ ಸಾಕ್ಷಿಯಾಗುತ್ತಿದ್ದ ಸಂದರ್ಭವದು. ಅದೂ ಅಲ್ಲೊಬ್ಬ ಭಾರತೀಯ ಮಹಿಳೆ ಈ ದಾಖಲೆಗಾಗಿ ತನಗೆ ಎದುರಾಗಬಹುದಾದ ಸವಾಲಿನ ನಿರೀಕ್ಷೆಯಲ್ಲಿದ್ದರು. ಅಗೋ ಸವಾಲು ಅವರ ಎದುರಿಗೆ ಬಂದೇ ಬಿಟ್ಟಿತು. ಅದು ಅಂತಿAಥÀ ಸವಾಲಾಗಿರಲಿಲ್ಲ. ಎರಡು 13 ಅಂಕಿಗಳ ಸಂಖ್ಯೆಗಳನ್ನು ಗುಣಿಸಲು ಅವರಿಗೆ ನೀಡಲಾಗಿತ್ತು. ಅದುವೇ 7686369774870 × 2465099745779. ಅಂದರೆ ಅದರ ಉತ್ತರ ೨೬ ಅಂಕಿಗಳುಳ್ಳ ಒಂದು ಬೃಹತ್ ಸಂಖ್ಯೆಯಾಗಿತ್ತು. ಪ್ರಶ್ನೆ ಕೇಳಿದ್ದು ಏನು ಎಂದು ನೆರೆದಿದ್ದವರಿಗೆ  ಅರ್ಥ ಆಗುವ ವೇಳೆಗಾಗಲೇ 28 ಸೆಕೆಂಡಿನಲ್ಲೇ ಅದರ ಉತ್ತರ  18947668177995426462773730 ಎಂದು ಆ ಮಹಿಳೆಯು ಸರಿಯಾಗಿ ಉತ್ತರ ನೀಡಿಯಾಗಿತ್ತು. ಆಗ ಸಭಿಕರ ಮುಗಿಲು ಮುಟ್ಟುವ ಕರತಾಡನದೊಂದಿಗೆ ಗಿನ್ನಿಸ್ ದಾಖಲೆಯ ಪುಟಗಳಲ್ಲಿ ಆ ಮಹಿಳೆಯ ಹೆಸರು “ ವಿಶ್ವದ ಅತ್ಯಂತ ವೇಗದ ಮಾನವ ಕಂಪ್ಯೂಟರ್ ” ಎಂದು ಸೇರ್ಪಡೆಯಾಗಿತ್ತು. ಆ ಮಹಿಳೆ ಮತ್ಯಾರು ಅಲ್ಲ ಕಂಪ್ಯೂಟರ್‌ಗಳನ್ನೇ ತನ್ನ ಮೇಧಾ ಶಕ್ತಿಯಿಂದ ಮಣಿಸಿದ ಅಪಾರ ತಾರ್ಕಿಕ ಹಾಗೂ ಸಂಖ್ಯಾ ಪಾಂಡಿತ್ಯವನ್ನು ಹೊಂದಿ ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಗಳಿಸಿದ ಭಾರತೀಯ ಗಣಿತ ಶಾಸ್ತçಜ್ಞೆ ಶಕುಂತಲಾ ದೇವಿ. 

        ಮಾನವನು ಕಂಪ್ಯೂಟರ್‌ಗಳನ್ನು ಸೃಷ್ಟಿಸಿದನೇ ಹೊರತು ಕಂಪ್ಯೂಟರ್‌ಗಳು ಮಾನವನನ್ನು ಸೃಷ್ಟಿಸಲಿಲ್ಲ ಎಂದು ಹೇಳುತ್ತಾ ಎಲ್ಲಕ್ಕಿಂತಲೂ ಮಿಗಿಲು ಅಂದರೆ ಅದು ಮಾನವನ ಬುದ್ಧಿಶಕ್ತಿ  ಎಂದು ಹೇಳಿದವರು ಈ ಮಾನವ ಕಂಪ್ಯೂಟರ್ ಶಕುಂತಲಾದೇವಿ. ಸಂಖ್ಯೆಗಳು ಕೇವಲ ಸಂಕೇತಗಳಲ್ಲ ಅವು ಜೀವ ಹೊಂದಿವೆ ಎನ್ನುವುದು ಶಕುಂತಲಾದೇವಿಯವರ ಅಚಲ ನಂಬಿಕೆ ಆಗಿತ್ತು.

          ಶಕುಂತಲಾ ದೇವಿ ನಮ್ಮ ಕರ್ನಾಟಕದ ಬೆಂಗಳೂರಿನವರೇ ಎಂಬುದು ನಮಗೆ ಹೆಮ್ಮೆಯ ವಿಷಯವೇ ಸರಿ. ಶಕುಂತಲಾ ದೇವಿಯವರು ನವೆಂಬರ್ 4 , 1929 ರಂದು ಬೆಂಗಳೂರಿನ ಗವೀಪುರಂನ ಗುಟ್ಟಹಳ್ಳಿಯ ಕೊಳಚೆ ಪ್ರದೇಶವೊಂದರಲ್ಲಿ ಅಪ್ಪಟ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ರಾಜಾರಾವ್ ಹಾಗೂ ತಾಯಿ ಸುಂದರಮ್ಮ. ಅವರ ಕುಟುಂಬ ಪೌರೋಹಿತ್ಯಕ್ಕೆ ಹೆಸರು ವಾಸಿಯಾಗಿತ್ತು. ಆದರೆ ಶಕುಂತಲಾ ದೇವಿಯವರ ತಂದೆ ಆ ವೃತ್ತಿಯನ್ನು ಬಿಟ್ಟು ಸರ್ಕಸ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿ ಇಸ್ಪೀಟ್ ಎಲೆಗಳಲ್ಲಿ ಮಾಡುವ ಕೈಚಳಕದ ಬಗ್ಗೆ ಮಗಳಿಗೆ ಅವರು ತರಬೇತಿ ನೀಡಿದರು. ನಂತರ ಅದನ್ನು ಕರಗತ ಮಾಡಿಕೊಂಡ ಪುಟಾಣಿ ಶಕುಂತಲಾ ದೇವಿ ತಂದೆಯೇ ದಂಗು ಬಡಿಯುವಂತೆ ಆ ಇಸ್ಪೀಟ್ ಎಲೆಗಳಲ್ಲಿ ಮೋಡಿ ಮಾಡಲು ಶುರು ಮಾಡಿದಳು. ನಂತರ ಅಂಕಿ ಸಂಖ್ಯೆಗಳಲ್ಲಿ ಅವಳ ಆಸಕ್ತಿಯನ್ನು ಮನಗಂಡ ಅವಳ ತಂದೆ ಗಣಿತಜ್ಞಾನದ ಪ್ರದರ್ಶನ ಏರ್ಪಡಿಸಲು ಶುರು ಮಾಡಿದರು. ಅಲ್ಲಿಂದ ಶಕುಂತಲಾ ದೇವಿಯ ಗಣಿತದ ಆರಾಧನೆ ಶುರು ಆಯಿತು ಎಂದೇ ಹೇಳಬೇಕು. ಆದರೆ ಮಗಳನ್ನು ಪ್ರತಿಭಾವಂತಳನ್ನಾಗಿ ಮಾಡಲೇ ಬೇಕೆಂದು ನಿರ್ಧರಿಸಿದ್ದ ತಂದೆ ರಾಜಾರಾವ್ ಅವರು ಶಕುಂತಲಾದೇವಿಗೆ ೧೦ ವರ್ಷ ವಯಸ್ಸಾಗಿದ್ದಾಗ ಚಾಮರಾಜ ಪೇಟೆಯಲ್ಲಿದ್ದ ಸೇಂಟ್ ತೆರೆಸಾ ಕಾನ್ವೆಂಟ್ ಸ್ಕೂಲ್‌ಗೆ ಒಂದನೆಯ ತರಗತಿಗೆ ಸೇರಿಸಿದರು. ಆದರೆ ಪ್ರತೀ ತಿಂಗಳು 2 ರೂ ಫೀಸ್ ಕೊಡಲು ಸಾಧ್ಯವಾಗದೇ ಹೋದುದರಿಂದ ಶಕುಂತಲಾದೇವಿಯವರು ಶಾಲೆಯಿಂದ ಹೊರ ಹಾಕಲ್ಪಟ್ಟರು. ಆದರೂ ಈ ಗಣಿತದ ಪ್ರತಿಭೆ ಕಮರಲಿಲ್ಲ. ಬದಲಾಗಿ ಅತೀವ ಆತ್ಮವಿಶ್ವಾಸ ಹೊಂದಿದ್ದ ಶಕುಂತಲಾದೇವಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಹುದೊಡ್ಡ ಪ್ರದರ್ಶನವೊಂದನ್ನು ನೀಡಿ ಅಲ್ಲಿದ್ದ ಜನರಿಂದ ಸೈ ಎನಿಸಿಕೊಂಡರು. 13 ರಿಂದ 200 ರವರೆಗಿನ ಸಂಖ್ಯೆಗಳನ್ನು ಇಟ್ಟುಕೊಂಡು ಗುಣಾಕಾರ , ಭಾಗಾಕಾರ , ವರ್ಗಮೂಲ , ಘನಮೂಲ ಮೊದಲಾದ ಯಾವುದೇ ಗಣಿತ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಬಿಡಿಸುತ್ತಿದ್ದುದು ಅವರ ಆ ಪ್ರದರ್ಶನದ ವಿಶೇಷತೆಯಾಗಿತ್ತು. ಈ ಪ್ರದರ್ಶನ ನಡೆದಾಗ ಆಕೆಯ ವಯಸ್ಸು ಕೇವಲ ಆರು ವರ್ಷ. ಮುಂದಿನದು ಇತಿಹಾಸ. ಶಕುಂತಲಾದೇವಿ ನಂತರ ಈ ಗಣಿತ ಕೌಶಲವನ್ನು ವೃಧ್ಧಿಸಿಕೊಂಡು ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋದರು.ವಿಶ್ವದ ಅನೇಕ ವಿಶ್ವವಿದ್ಯಾಲಯಗಳಿಂದ ಆಹ್ವಾನಿತರಾಗಿ ತಮ್ಮ ಗಣಿತ ಪ್ರದರ್ಶನಗಳಿಂದ ಎಲ್ಲರನ್ನೂ ಮೋಡಿ ಮಾಡುತ್ತಲೇ ಸಾಗಿದರು. ಸಹಜವಾಗಿಯೇ ಮಾನವ ಕಂಪ್ಯೂಟರ್ ಎಂದು ಖ್ಯಾತಿ ಗಳಿಸಿದರು.

    ಶಕುಂತಲಾ ದೇವಿಯವರಿಗೆ ಜ್ಯೋತಿಷ್ಯ ಶಾಸ್ತç ಸಹಾ ಪ್ರಿಯವಾದ ವಿಷಯಗಳಲ್ಲಿ ಒಂದಾಗಿತ್ತು. ಅದರಲ್ಲೂ ಸಹ ಅನೇಕ ಜ್ಯೋತಿಷ್ಯದ ಸಲಹೆಗಳನ್ನು ನೀಡುತ್ತಿದ್ದರು. ಅಲ್ಲದೇ ಖಗೋಳ ಶಾಸ್ತçದಲ್ಲೂ ಸಿಧ್ಧಿ ಇತ್ತು. ಶಕುಂತಲಾದೇವಿಯವರಿಗೆ ೧೫ ವರ್ಷ ವಯಸ್ಸಾಗಿದ್ದಾಗ 1944 ರಲ್ಲಿ ಲಂಡನ್‌ಗೆ ತಂದೆಯವರ ಜೊತೆಯಲ್ಲಿ ಹೋಗಿ ಪುನಃ ಭಾರತಕ್ಕೆ 1960 ರಲ್ಲಿ ವಾಪಾಸಾದರು.ಇದೇ ಸಮಯದಲ್ಲಿ ಕೋಲ್ಕತ್ತಾದ ಭಾರತೀಯ ಆಡಳಿತ ಸೇವೆಯಲ್ಲಿದ್ದ ಪಾರಿತೋಶ್ ಬ್ಯಾನರ್ಜಿ ಎಂಬುವರನ್ನು ವಿವಾಹವಾದರು. ಆದರೆ ಈ ಸಂಬAಧ ತುಂಬಾ ಸಮಯ ಉಳಿಯಲಿಲ್ಲ. 1979 ರಲ್ಲಿ ವಿವಾಹ ವಿಚ್ಛೇದನ ಪಡೆದರು. ಇವರಿಗೆ ಅನುಪಮಾ ಎಂಬ ಮಗಳಿದ್ದಳು.  ಶಕುಂತಲಾ ದೇವಿ 1980 ರಲ್ಲಿ ಪುನಃ ಬೆಂಗಳೂರಿಗೆ ವಾಪಾಸ್ ಬಂದರು.

    ನಂತರದ ದಿನಗಳಲ್ಲಿ ಗಣಿತೀಯ ಕೆಲಸಗಳಲ್ಲಿ ಪುನಃ ಆಸಕ್ತಿಯಿಂದ ತೊಡಗಿಸಿಕೊಂಡರು. ಬೆಂಗಳೂರಿನ ಎಚ್.ಎಸ್.ಆರ್ ಲೇ ಔಟ್‌ನಲ್ಲಿ “ ಶಕುಂತಲಾ ದೇವಿ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ - ಸೈನ್ಸ್ ಆಂಡ್ ಪಿಯು ಕಾಲೇಜ್ ” ಎಂಬ ಪ್ರತಿಷ್ಠಿತ ವಿದ್ಯಾಸಂಸ್ಥೆಯನ್ನು  ಸ್ಥಾಪಿಸಿ ಮುನ್ನೆಡೆಸುತ್ತಿದ್ದರು. ಈ ಸಂಸ್ಥೆಯು ಕೆಲವು ವಿಶೇಷ ಭಾರತೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದರಲ್ಲಿ ಕೆಲಸ ಮಾಡುತ್ತಿದೆ. ಅಲ್ಲದೇ ವೇದಿಕ್ ಮ್ಯಾಥೆಮ್ಯಾಟಿಕ್ಸ್ ಬಗ್ಗೆಯೂ ಉತ್ತಮ ಕೆಲಸ ನಡೆದಿದೆ.  


ಶಕುಂತಲಾದೇವಿಯವರ ಗಣಿತದ ಸಾಧನೆಗಳು :

  1)  ಗಿನ್ನಿಸ್ ದಾಖಲೆಯ ಪುಟಗಳಲ್ಲಿ ಅವರ ಹೆಸರು “ ವಿಶ್ವದ ಅತ್ಯಂತ ವೇಗದ ಮಾನವ ಕಂಪ್ಯೂಟರ್ ” ಎಂದು ಸೇರ್ಪಡೆಯಾಗಿದ್ದು ಅವರ ಹೆಗ್ಗಳಿಕೆ.

  2)  ಬಹುತೇಕ ಅನೇಕ ದೇಶಗಳಲ್ಲಿ ಕಾರ್ಯಕ್ರಮ ನೀಡಿ ಗಣಿತದಲ್ಲಿ ಅವರ ವಿದ್ವತ್ತನ್ನು ತಿಳಿಯಪಡಿಸಿ ಅನೇಕ ಗಣಿತಾಂಕ್ಷಿಗಳಿಗೆ ಪ್ರೇರಕ ಶಕ್ತಿಯಾದರು.

  3)  ಶಕುಂತಲಾ ದೇವಿ ೨೦ ಸೆಕೆಂಡುಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮಾಡಿದ ಲೆಕ್ಕಾಚಾರಗಳು ಕೆಳಗಿನಂತಿವೆ.

i)       25842278 + 111201721 + 370247830 + 55511315 = ಬಂದ ಉತ್ತರವನ್ನು 9878 ರಿಂದ ಗುಣಿಸಿ ಬಂದ ಗುಣಲಬ್ಧ 5559369456432 ಎಂದು ತಿಳಿಸಿದ್ದದ್ದು.

ii) 188132517 ರ  ಘನಮೂಲವನ್ನು573 ಎಂದು ತಿಳಿಸಿ ಸ್ಪರ್ಧೆಯೊಂದರಲ್ಲಿ ವಿಜೇತರಾಗಿದ್ದದ್ದು

iii) 1935 ರ ಪ್ರತೀ ತಿಂಗಳ 14ನೇ ತಾರೀಖು ಯಾವ ಯಾವ ದಿನಗಳೆಂದು ಹೇಳಿದ್ದು.

  ೪)  7 ರ ಘಾತ 13 ಲೆಕ್ಕಾಚಾರ ಮಾಡಿದ್ದದ್ದು, ತುಂಬಾ ಮುಖ್ಯವಾದ ಸಾಧನೆಗಳಲ್ಲಿ ಒಂದು ಎಂದರೆ 1977 ರಲ್ಲಿ ಡಲ್ಲಾಸ್ ನ ಯೂನಿವರ್ಸಿಟಿಯಲ್ಲಿ  201 ಅಂಕಿಗಳನ್ನು ಒಳಗೊಂಡಿರುವ ಒಂದು ಸಂಖ್ಯೆಯ 23 ನೇ ಮೂಲವನ್ನು ಕಂಡುಹಿಡಿದದ್ದು. ಒಂದು ಮೊಬೈಲ್ ನಂಬರ್ ನೆನಪಿಡಲು ಒದ್ದಾಡುವ ನಾವು 201 ಅಂಕಿಗಳ ಸಂಖ್ಯೆ ನೆನಪಿಡಲು ಸಾಧ್ಯವೇ....? ಇನ್ನು ಅದರ ೨೩ ನೇ ಮೂಲ ಕಂಡುಹಿಡಿಯಿರಿ ಎಂದರೆ ಮುಗಿದೇ ಹೋಯಿತು ಅಲ್ಲವೇ ?. ಅಂತಹದರಲ್ಲಿ 201 ಅಂಕಿಗಳುಳ್ಳ ಸಂಖ್ಯೆ 9167486769200915809866092758538016248310668014430862240712651642793465704086703279205767480806790022783016354924852380335745316935111903596577547340075681688620821016129132845564805780158806771ಇದರ ಮೂಲವನ್ನು ಕೇವಲ 50 ಸೆಕೆಂಡುಗಳಲ್ಲಿ 546372891  ಎಂದು ಉತ್ತರಿಸಿದರು. ಆದರೆ ಈ ಉತ್ತರವನ್ನು ದೃಢಪಡಿಸಲು 12000 ಸೂಚನೆಗಳನ್ನು ಫೀಡ್ ಮಾಡಿದ್ದ ಆಗಿನ ಶಕ್ತಿಶಾಲಿ ಕಂಪ್ಯೂಟರ್ ಆದ  UNIVAC 1108  ಹೆಚ್ಚು ಸಮಯ ಅಂದರೆ 62 ಸೆಕೆಂಡುಗಳನ್ನು ತೆಗೆದುಕೊಂಡಿತು.

  ೫)  ಅನೇಕ TV ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದರು. ಅದರಲ್ಲಿ ಒಮ್ಮೆ BBC ದೂರದರ್ಶನ ಕಾರ್ಯಕ್ರಮದಲ್ಲಿ ಅವರು ಒಂದು ಸಂಖ್ಯೆಯ ಘನಮೂಲವನ್ನು ಕಂಡುಹಿಡಿಯುವಂತೆ ತಿಳಿಸಿದಾಗ ಕೊಟ್ಟಿದ್ದ ಸಂಖ್ಯೆಯೇ ತಪ್ಪಾಗಿತ್ತೆಂದು ಕ್ಷಣಾರ್ಧದಲ್ಲಿ ತಿಳಿಸಿದರು. ಅಲ್ಲದೇ ಅವರು ನೀಡಿದ ಅನೇಕ ಸಮಸ್ಯೆಗಳಿಗೆ ವೇಗವಾಗಿ ಉತ್ತರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

೬)  ಕೆನಡಾ ದೇಶದ ಟೊರಾಂಟೋದ ಅಪ್ಪರ್ ಗ್ರೇಡ್ ಕಾಲೇಜಿನವರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾ 331373888 ರ ಘನಮೂಲವು 692 ಎಂದು ಕ್ಷಣ ಮಾತ್ರದಲ್ಲೇ ಉತ್ತರಿಸಿ ಅಚ್ಚರಿ ಮೂಡಿಸಿದರು. 

  ೭)  ಎಲ್ಲಾ ಕಾರ್ಯಕ್ರಮಗಳಲ್ಲೂ ಯಾವುದೇ ವರ್ಷದ ಯಾವುದೇ ತಿಂಗಳ ದಿನಾಂಕ ನೀಡಿದರೆ ಅದು ಯಾವ ದಿನವೆಂದು ತಕ್ಷಣವೇ ಹೇಳುತ್ತಿದ್ದರು. ಅಲ್ಲದೇ ಯಾವುದೇ ನಿರ್ದಿಷ್ಟ ವರ್ಷದಲ್ಲಿ ಒಂದು ನಿರ್ದಿಷ್ಟ ದಿನಾಂಕ ಯಾವ ತಿಂಗಳಲ್ಲಿ ಯಾವ ದಿನವೆಂದೂ , ಯಾವುದೇ ವರ್ಷದಲ್ಲಿ ಎಲ್ಲಾ ತಿಂಗಳಲ್ಲಿ ಬರುವ ಒಂದು ನಿರ್ದಿಷ್ಟ ದಿನ ಯಾವ ಯಾವ ದಿನಾಂಕಗಳಲ್ಲಿ ಬರುವುದೆಂದು ಇದೇ ಮೊದಲಾದ ಕ್ಯಾಲೆಂಡರ್ ಸಂಬAಧಿ ಲೆಕ್ಕಾಚಾರಗಳನ್ನು ನಿಖರವಾಗಿ ಶೀಘ್ರವಾಗಿ ಹೇಳಿ ದಂಗು ಬಡಿಸುತ್ತಿದ್ದರು.

 ೮)  ಯೂನಿವರ್ಸಿಟಿ ಆಫ್ ಟ್ರಿನಿಡ್ಯಾಡ್‌ನಲ್ಲಿ ಏರ್ಪಟ್ಟಿದ್ದ ಸಂವಾದ ಕಾರ್ಯಕ್ರಮದಲ್ಲಿ ಅನೇಕ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಿಡಿಸಿ ಪ್ರಶಂಸೆಗೆ ಪಾತ್ರರಾದರು. ಅಲ್ಲಿಯ ಗಣಿತಾಸಕ್ತರೊಬ್ಬರು ಮತ್ತು    ಸಮಸ್ಯೆಗಳ ಉತ್ತರ ಕೇಳಿದಾಗ ಸ್ವಲ್ಪವೂ ಸಮಯ ತೆಗೆದುಕೊಳ್ಳದೇ ಆ ಸಮಸ್ಯೆಗಳ ಉತ್ತರ 36 ಹಾಗೂ 456 ಎಂದು ಹೇಳಿದ್ದರು.

 ೯) ಯಾವುದೇ ದೇಶದ ವಿಶ್ವವಿದ್ಯಾಲಯಗಳಿಗೆ ಹೋದಾಗ ಅವರಿಂದಲೇ ಅಂಕಿಗಳನ್ನು ಪಡೆದು ಸುಲಭವಾಗಿ ಯಾವುದೇ ಸಮಯ ತೆಗೆದುಕೊಳ್ಳದೇ ಮಾಯಾಚೌಕಗಳನ್ನು ರಚಿಸುತ್ತಿದ್ದರು.


   ಶಕುಂತಲಾ ದೇವಿಯವರು ಬರೆದ ಪುಸ್ತಕಗಳು :

     1)    Puzzles   to  puzzle  you.

          2)    More Puzzles   to  puzzle  you.

          3)    The book of numbers.

          4)    Mathability : The math genius in your child.

          5)    Figuring :  The joy of numbers.

          6)    Awaken the genius in your child.

          7)    Perfect murder.

          8)    Astrology for you.

          9)     In the wonder land of numbers.

        10) Super memory … It can be yours.


ಶಕುಂತಲಾ ದೇವಿಯವರಿಗೆ ಸಂದ ಪ್ರಶಸ್ತಿಗಳು :

      ·      1969 ರಲ್ಲಿ  ಫಿಲಿಫೈನ್ಸ್ ವಿಶ್ವವಿದ್ಯಾಲಯ  ಸ್ವರ್ಣ ಪದಕಗಳೊಂದಿಗೆ “ ಆ ವರ್ಷದ ಅತಿ ಮಹತ್ವದ ಮಹಿಳೆ ” ಎಂಬ ಪ್ರಶಸ್ತಿ ಪ್ರಧಾನ ಮಾಡಿತು.

       ·      1988 ರಲ್ಲಿ ಅಮೇರಿಕದ ವಾಷಿಂಗ್ಟನ್.ಡಿ.ಸಿ ಯಲ್ಲಿ ಸ್ವರ್ಣ ಪದಕಗಳೊಂದಿಗೆ “ ರಾಮಾನುಜನ್ ಮ್ಯಾಥೆಮ್ಯಾಟಿಕಲ್ ಜೀನಿಯಸ್ ಅವಾರ್ಡ್ ” ಪ್ರಶಸ್ತಿ ಪ್ರಧಾನ.

       ·       ಇತ್ತೀಚಿಗೆ 2013 ರಲ್ಲಿ “ ಜೀವಮಾನದ ಸಾಧನೆ ಪ್ರಶಸ್ತಿ ” ಸಹ ನೀಡಿ ಗೌರವಿಸಲಾಗಿತ್ತು.

       ·       ಇದಲ್ಲದೇ ವಿಶ್ವದ ಬಹುತೇಕ ದೇಶಗಳಲ್ಲಿ ಪ್ರದರ್ಶನಗಳನ್ನು ನೀಡಿ ಗೌರವಕ್ಕೆ ಪಾತ್ರರಾಗಿದ್ದರು.

   ·       ಅಮೇರಿಕದ ಪ್ರತಿಷ್ಟಿತ ಪತ್ರಿಕೆಯಾದ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಅನೇಕ ಪತ್ರಿಕೆಗಳು ಶಕುಂತಲಾ ದೇವಿಯವರ ಪ್ರತಿಭೆಯನ್ನು ಹಾಡಿ ಹೊಗಳಿದವು.

ಶಕುಂತಲಾದೇವಿಯ ಜೀವನದ ಕೆಲವು ರಸ ನಿಮಿಷಗಳು:

೧)   ಅದು ೧೯೮೮ ನೇ ಇಸ್ವಿ . USAಗೆ ಶಕುಂತಲಾದೇವಿ ಭೇಟಿ ನೀಡಿದ ಸಂದರ್ಭವದು. ಇವರ ಅದ್ಭುತ ವಿದ್ವತ್ ಅನ್ನು ನೋಡಿ ಪುಳಕಿತರಾಗಿದ್ದ ಮನೋಶಾಸ್ತçಜ್ಞರು ಹಾಗೂ ಸ್ಟಾö್ಯನ್ ಫೋರ್ಡ್ ವಿಶ್ವ ವಿದ್ಯಾಲಯದ ಪ್ರೊಫೆಸರ್ ಆಗಿದ್ದ ಜೆನ್‌ಸನ್ ಅವರು ಶಕುಂತಲಾದೇವಿಯ ವಿದ್ವತ್ ಪರೀಕ್ಷೆಗೆ ಅನೇಕ ಗಣಿತದ ಪ್ರಶ್ನೆಗಳನ್ನು ಅವರಿಗೆ ಒಡ್ಡಿದ್ದರು. ಅಂದು ಶಕುಂತಲಾದೇವಿಯವರು ಆ ಎಲ್ಲಾ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಿಡಿಸಿದ್ದರು. 1990 ರಲ್ಲಿ ಪ್ರಕಟವಾದ ಜೆನ್ಸನ್ ಅವರ ಲೇಖನದಲ್ಲಿ ಅವರು ಹೀಗೆ ಹೇಳುತ್ತಾರೆ “ ನಾನು ಅಂದು ಶಕುಂತಲಾದೇವಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಅವುಗಳನ್ನು ನನ್ನ ನೋಟ್ ಬುಕ್‌ಗೆ ದಾಖಲು ಮಾಡುವಷ್ಟರಲ್ಲಿ ಅವರು ಉತ್ತರ ಹೇಳುತ್ತಿದ್ದರು. ಒಂದು ಕಠಿಣ ಪ್ರಶ್ನೆ ಎನಿಸಿದ ಹಾಗೂ  ಗಳನ್ನು ದೇವಿ ಅವರಿಗೆ ನೀಡಿ ಉತ್ತರಿಸಲು ತೆಗೆದುಕೊಂಡ ಸಮಯ ದಾಖಲಿಸಲು ತಮ್ಮ ಹೆಂಡತಿಗೆ ಹೇಳುವ ಮುನ್ನವೇ ಶಕುಂತಲಾ ದೇವಿ ಅದರ ಉತ್ತರಗಳು 395 ಹಾಗೂ 15 ಎಂದು ಹೇಳಿ ಅಚ್ಚರಿ ಮೂಡಿಸಿದ್ದರು ಎಂದು.”

೨)  ಶಕುಂತಲಾ ದೇವಿಯವರು ತಮ್ಮ ಪ್ರತಿಭೆಯನ್ನು ಹಲವು ಪುಸ್ತಕಗÀಳ ಮೂಲಕ ಕಟ್ಟಿ ಕೊಟ್ಟಿದ್ದರು. ಪುಸ್ತಕ ಪ್ರದರ್ಶನ ಏರ್ಪಡಿಸುತ್ತಿದ್ದ ಕಡೆಗಳೆಲ್ಲೆಲ್ಲಾ ಶಕುಂತಲಾ ದೇವಿಯವರ ಪುಸ್ತಕಗಳು ಅನಾವರಣಗೊಳ್ಳುತ್ತಿದ್ದವು. ಒಮ್ಮೆ ದೆಹಲಿಯ ಪುಸ್ತಕ ಪ್ರದರ್ಶನದಲ್ಲಿ ಒಬ್ಬ ಹುಡುಗ ತನ್ನ ತಾಯಿಯ ಜೊತೆ ಹಲವು ಪುಸ್ತಕಗಳನ್ನು ಕೊಳ್ಳುತ್ತಿದ್ದ. ನಂತರ ಶಕುಂತಲಾ ದೇವಿಯವರ ಪುಸ್ತಕವೊಂದನ್ನು ನೋಡಿ ಉತ್ಸಾಹಿತನಾದ ಅವನು ಅದನ್ನು ಸಹಾ ಕೊಡಿಸುವಂತೆ ದುಂಬಾಲು ಬಿದ್ದನು.ಆಗಲೇ 20 ಪುಸ್ತಕಗಳನ್ನು ಕೊಡಿಸಿದ್ದ ಅವನ ತಾಯಿ ಅದನ್ನು ಕೊಡಿಸಲು ನಿರಾಕರಿಸಿದಳು.ಆದರೆ ಆ ಹುಡುಗ ಹಠಕ್ಕೆ ಬಿದ್ದನು.ಈ ಗಲಾಟೆಯನ್ನು ಗಮನಿಸಿದ ಮಹಿಳೆಯೊಬ್ಬಳು ಅಲ್ಲಿಗೆ ಧಾವಿಸಿ ಬಂದು ಆ ಹುಡುಗನಿಗೆ ಶಕುಂತಲಾದೇವಿಯವರ ಪುಸ್ತಕವೇ ಏಕೆ ಬೇಕೆಂದು ಕೇಳಿದಾಗ ಆತ ಈಗಾಗಲೇ ತಾನು ಅವರ ಪುಸ್ತಕಗಳಿಂದ ಕಲಿತಿದ್ದ ಕೆಲವೊಂದು ಗಣಿತದ ಟ್ರಿಕ್ಸ್ ಗಳನ್ನು ಹೇಳಿದ.ಆಗ ಆ ಮಹಿಳೆಯೂ ಸಹ ಕೆಲವೊಂದು ಗಣಿತದ ಟ್ರಿಕ್ಸ್ ಗಳನ್ನು ಆ ಹುಡುಗನಿಗೆ ಹೇಳಿಕೊಟ್ಟು ಅವನಿಗೆ ಅಚ್ಚರಿ ಮೂಡುವಂತೆ ಮಾಡಿದರು. ಆಗ ಹುಡುಗ ನೀವು ಸಹಾ ಶಕುಂತಲಾದೇವಿಯವರ ಪುಸ್ತಕಗಳನ್ನು ಓದಿದ್ದೀರಾ ಎಂದು ಕೇಳಿದಾಗ ಅವರು ನಸುನಕ್ಕು ಮಗು ನಾನೇ ಕಣೋ ಶಕುಂತಲಾ ದೇವಿ ಎಂದು ಹೇಳಿ ಅವನು ಇಷ್ಟಪಟ್ಟಿದ್ದ ಅವರ ಪುಸ್ತಕವನ್ನು ತನ್ನ ಹಸ್ತಾಕ್ಷರದೊಂದಿಗೆ ನೀಡಿ ಅವನ ಸಂಭ್ರಮಕ್ಕೆ ಕಾರಣರಾದರು.ಇದು ಅವರ ಉತ್ತಮ ಗುಣಕ್ಕೆ ಹಾಗೂ ಗಣಿತ ಕಲಿಕೆಗೆ ಮಕ್ಕಳನ್ನು ಅವರು ಪ್ರೋತ್ಸಾಹಿಸುತ್ತಿದ್ದ ರೀತಿಗೆ ಒಂದು ನಿದರ್ಶನವಾಗಿತ್ತು.

೩)  ಒಮ್ಮೆ ಶಕುಂತಲಾದೇವಿಯವರು ಕೋಲ್ಕತ್ತ ವಿಮಾನದಲ್ಲಿ ಪ್ರಯಾಣಿಸುವಾಗ ತಮಾಷೆಯಾಗಿದ್ದ ಸಂಗತಿಯೊAದು ನಡೆಯಿತು. ಶಕುಂತಲಾದೇವಿಯವರು ಪ್ರಯಾಣದಲ್ಲಿ ತಮಗೆ ಬೇಸರವಾದಾಗ ತನ್ನ ಸಹ ಪ್ರಯಾಣಿಕರೊಬ್ಬರ ಜೊತೆ ಮಾತಿಗಿಳಿದರು. ಆ ಸಹಪ್ರಯಾಣಿಕ ಸಿತಾರ್ ವಾದ್ಯವನ್ನು ಹಿಡಿದಿದ್ದರು. ಆಗ ಶಕುಂತಲಾದೇವಿಯವರು ಅವರಿಗೆ ನಿಮಗೆ ಸಿತಾರ್ ನುಡಿಸುವುದು ಇಷ್ಟವೇ ಎಂದು ಕೇಳಿದರು. ಹೌದೆಂದು ಆ ಸಹ ಪ್ರಯಾಣಿಕ ಹೇಳಿದಾಗ ಶಕುಂತಲಾದೇವಿ ನೀವು ಪ್ರಖ್ಯಾತ ಸಿತಾರ್ ವಾದಕ ರವಿಶಂಕರ್ ರವರಿಂದ ಸಿತಾರ್ ಹೇಳಿಸಿಕೊಂಡಿದ್ದರೆ ಚೆನ್ನಾಗಿತ್ತು ಎಂದರು. ಆಗ ಆ ಸಹಪ್ರಯಾಣಿಕ ನೀವು ಅವರ ವಾದನವನ್ನು ಕೇಳಿದ್ದೀರಾ ಅಂದಾಗ ಶಕುಂತಲಾದೇವಿಯವರು ನನಗೆ ಅವರ ಸಂಗೀತವೆAದರೆ ತುಂಬಾ ಇಷ್ಟವೆಂದು ಪ್ರತಿಕ್ರಿಯಿಸುತ್ತಾರೆ. ಆಗ ಆ ವ್ಯಕ್ತಿ ನಸುನಕ್ಕು ಮೇಡಮ್ ನಾನೇ ಆ ಸಿತಾರ್ ವಾದಕ ರವಿಶಂಕರ್ ಎನ್ನುತ್ತಾರೆ ಹಾಗೂ ಶಕುಂತಲಾದೇವಿ ಯವರನ್ನು ಸಹ ಪರಿಚಯಿಸಿಕೊಳ್ಳುತ್ತಾರೆ.ಈ ಸಂದರ್ಭದಿAದ ಶಕುಂತಲಾದೇವಿ  ಅವರು ಎಲ್ಲರೊಂದಿಗೆ ಸುಲಲಿತವಾಗಿ ಬೆರೆಯುತ್ತಿದ್ದರೆಂದು ತಿಳಿದುಬರುತ್ತದೆ.  

೪)  ಶಕುಂತಲಾದೇವಿಯವರು ಅವರ ವಿದ್ಯಾರ್ಥಿಗಳನ್ನು ಸಂಬೋಧಿಸುವಾಗ ಗಣಿತದ ಪಾಠಗಳ ಹೆಸರಿಟ್ಟೇ ಅವರನ್ನು ಕರೆಯುತ್ತಿದ್ದುದು ತಮಾಷೆಯಾಗಿರುತ್ತಿತ್ತು. hello you binomial theorem …… hello you quadratic equation ……. ಎಂದು ಸಂಬೋಧಿಸುತ್ತಿದುದು ತಮಾಷೆಯಾಗಿತ್ತು ಎಂದು ಅವರೇ ಹೇಳುತ್ತಾರೆ.

ಶಕುಂತಲಾ ದೇವಿಯವರ ಹವ್ಯಾಸ ಹಾಗೂ ಅಭಿರುಚಿಗಳು :

    ಶಕುಂತಲಾ ದೇವಿಯವರು ಗಣಿತಕ್ಕೇ ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು ಎಂದರೆ ತಪ್ಪಾಗಲಾರದು. ಅಲ್ಲದೇ ಜ್ಯೋತಿಷ್ಯ ಶಾಸ್ತç ಹಾಗೂ ಖಗೋಳ ಶಾಸ್ತç ಗಳೆಂದರೆ ಅವರಿಗೆ ಅಚ್ಚು ಮೆಚ್ಚಾಗಿತ್ತು. ಪಾಕ ಶಾಸ್ತçವನ್ನು ಅಂದರೆ ಅಡುಗೆ ಮಾಡುವುದನ್ನು ಸಹಾ ಅವರು ಬಹಳವಾಗಿ ಪ್ರೀತಿಸುತ್ತಿದ್ದರು.  ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದ ಶಕುಂತಲಾ ದೇವಿಯವರು ಮಸಾಲ ದೋಸೆಯನ್ನು ತುಂಬಾ ಇಷ್ಟ ಪಡುತ್ತಿದ್ದರೆಂದು ಅವರ ನಿಕಟವರ್ತಿಗಳು ಹೇಳುತ್ತಾರೆ.  ಅಲ್ಲದೇ “ ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ” ಕವನವನ್ನು ಆಗಾಗ ಗುನುಗುತ್ತಿದ್ದರು ಎಂದು ಸಹಾ ನೆನಪಿಸಿಕೊಳ್ಳುತ್ತಾರೆ.

ಶಕುಂತಲಾದೇವಿಯವರAತೆ ಆಗಲು ವಿದ್ಯಾರ್ಥಿಗಳು ಏನು ಮಾಡಬಹುದು ?

    ಶಕುಂತಲಾ ದೇವಿಯವರಿಗೆ ನಿಮ್ಮ ಈ ಪ್ರತಿಭೆಗೆ ಕಾರಣವೇನು ಹಾಗೂ ಯಾವಾಗಿನಿಂದ ನಿಮ್ಮ ಈ ಪ್ರತಿಭೆ ನಿಮಗೆ ತಿಳಿಯಿತು ಎಂದು ಕೇಳಿದಾಗ ದೇವಿಯವರು ಮುಗುಳ್ನಗುತ್ತಾ ಹೇಳುತ್ತಿದ್ದುದು ಅವರ ಅರಿವಿಗೆ ಬಾರದಂತೆಯೇ ಅವರಲ್ಲಿ ಪ್ರತಿಭೆ ಆವರಿಸಿತು ಎಂದು. ಅವರಿಗೆ ಗಣಪತಿ ದೇವರೆಂದರೆ ತುಂಬಾ ಇಷ್ಟವಿತ್ತಂತೆ. ಒಮ್ಮೆ ಅವರು ಹಬ್ಬದ ಸಮಯದಲ್ಲಿ ಗಣಪತಿಯ ಸಕ್ಕರೆಯಿಂದ ಮಾಡಿದ ಚಿಕ್ಕಮೂರ್ತಿಯನ್ನು ಇಡಿಯಾಗಿಯೇ ನುಂಗಿದ್ದರAತೆ. ಅಂದಿನಿAದ ನನಗೆ ಅರಿವು ಇಲ್ಲದಂತೆ ಈ ಪ್ರತಿಭೆ ಆವಾಹನೆ ಆಯಿತು ಎನ್ನುತ್ತಾರೆ. ಇದು ಅವರ ಗಣಪತಿಯ ಮೇಲಿನ ನಂಬಿಕೆ ಆಗಿತ್ತು. ಆದರೆ ಶಕುಂತಲಾ ದೇವಿಯವರು ಅವರಂತೆ ಗಣಿತದಲ್ಲಿ ಅಸೀಮ ಸಾಧನೆ ಮಾಡಲು ಇಚ್ಛಿಸುವವರಿಗೆ ಮೂರು ಮಂತ್ರಗಳನ್ನು ಹೇಳಿಕೊಡುತ್ತಾರೆ. ಅವುಗಳೆಂದರೆ.....

೧) ಏಕಾಗ್ರತೆ ಮತ್ತು ಕೇಂದ್ರೀಕೃತ ಸಾಧನೆ .

೨) ನಮ್ಮಲ್ಲಿ ನಾವು ಭರವಸೆ ಇಡುವುದು ( Self confidence - Believe  your self )

೩) ಪುನರಾವರ್ತನೆ.

ಅಲ್ಲದೇ ಶಕುಂತಲಾದೇವಿ ಹಾಗೂ ಅನೇಕ ಗಣಿತಜ್ಞರು ಹೇಳುವಂತೆ ಈ ಕೆಳಗಿನ ಅಂಶಗಳೂ ಸಹ ಉತ್ತಮ ಗಣಿತ ಸಾಮರ್ಥ್ಯಕ್ಕೆ ಕಾರಣ ಆಗುತ್ತದೆಯೆಂದು ಹೇಳುತ್ತಾರೆ. ಅವುಗಳೆಂದರೆ ..........

೧)   ನಿರಂತರ ಪ್ರಾಕ್ಟೀಸ್ , ಕ್ಯಾಲ್ಕುಲೇಟರ್ ಬಳಕೆ ತಗ್ಗಿಸುವುದು.

೨)  ಎಲ್ಲಾದರೂ ಹೋಗುವಾಗ ಗಣಿತದ ಬಗ್ಗೆಯೇ ಸಾಕಷ್ಟು ಚಿಂತಿಸುವುದು. ಉದಾಹರಣೆಗೆ ನಾನು ಪ್ರಯಾಣಿಸಬೇಕಾದ ದೂರ ಎಷ್ಟು ? ಯಾವ ವೇಗದಲ್ಲಿ ಚಲಿಸುತ್ತಿದ್ದೇನೆ ? ಶೇಕಡಾ ಎಷ್ಟು ಪ್ರಯಾಣ ಮುಗಿದಿದೆ ? ಶೇಕಡಾ ಎಷ್ಟು ಉಳಿದಿದೆ ? ಹೀಗೆ .......

೩)  ನಮ್ಮ ಮನೆಯ ವಿಸ್ತೀರ್ಣ ಎಷ್ಟಿದೆ ? ಗಾರ್ಡನ್ ವಿಸ್ತೀರ್ಣ ಎಷ್ಟಿದೆ ? ಹೀಗೆ ಇವೇ ಮೊದಲಾದ ಗಣಿತೀಯ ಲೆಕ್ಕಾಚಾರಗಳಲ್ಲಿ ಮುಳುಗಿರುವುದು.

೪)  ಯಾವುದೇ ಲೆಕ್ಕಾಚಾರ ಮಾಡುವಾಗ ನಮ್ಮದೇ ಆದ ಶೀಘ್ರ ವಿಧಾನಗಳನ್ನು (ಶಾರ್ಟ್ ಕಟ್ಸ್) ಕಂಡುಕೊಳ್ಳುವುದು. ಸಮಸ್ಯೆಗಳನ್ನು ಬಿಡಿಸಲು ನಮ್ಮದೇ ಆದ ವಿಧಾನಗಳ ಮೊರೆ ಹೋಗುವುದು.

೫)  ೧ ರಿಂದ ೨೫ ರವರೆಗಿನ ಮಗ್ಗಿ , ೧ ರಿಂದ ೩೦ ರವರೆಗಿನ ವರ್ಗ/ ವರ್ಗಮೂಲಗಳು, ೧ ರಿಂದ ೧೫ ರವರೆಗಿನ ಘನ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟಿರಬೇಕು.

 ೬)  ಮೂಲ ಗಣಿತೀಯ ಲೆಕ್ಕಾಚಾರಗಳಲ್ಲಿ ಪಳಗಿರಬೇಕು. ನಿರಂತರ ಅಭ್ಯಾಸ ತುಂಬಾ ಮುಖ್ಯ .

ಶಕುಂತಲಾ ದೇವಿಯವರ ಪುಸ್ತಕದಿಂದ ಆಯ್ದ ಕೆಲವು ಪಝಲ್ಸ್ :

೧)   ಒಂದು ಪೌಂಡ್ ಹತ್ತಿ ಹಾಗೂ ಒಂದು ಪೌಂಡ್ ಚಿನ್ನ ಇವುಗಳಲ್ಲಿ ಯಾವುದು ಭಾರ ?

೨)  ಒಂದು ಸಂಖ್ಯೆಯ ಅಂಕಿಗಳ ಮೊತ್ತದ ಮೂರರಷ್ಟು ಆ ಸಂಖ್ಯೆಗೆ ಸಮನಾದರೆ ಆ ಸಂಖ್ಯೆ ಯಾವುದು ?

೩)  ಮೂರು ಕ್ರಮಾನುಗತ ಸಂಖ್ಯೆಗಳ ಗುಣಲಬ್ಧವನ್ನು ಆ ಮೂರೂ ಸಂಖ್ಯೆಗಳಿAದ ಭಾಗಿಸಿದಾಗ ಬರುವ ಭಾಗಲಬ್ಧಗಳ ಮೊತ್ತ 74 ಆದರೆ ಆ ಸಂಖ್ಯೆಗಳು ಯಾವುವು ?

೪)  ಒಂದು ಸೀರೆ ಹಾಗೂ  ಒಂದು ಬ್ಲೌಸನ್ನು ರೂ.110 ಕ್ಕೆ ಮಾರ್ಕೆಟ್‌ನಿಂದ ಖರೀದಿಸಿದರೆ ಹಾಗೂ ಸೀರೆಯ ಬೆಲೆ ಬ್ಲೌಸ್‌ಗಿಂತ 100 ರೂ ಹೆಚ್ಚಾದರೆ ಆ ಸೀರೆಯ ಬೆಲೆಯೇನು ?

     ಉತ್ತರಗಳು : 

೧) ಎರಡೂ ಸಮನಾದ ತೂಕ ಹೊಂದಿರುತ್ತವೆ.  

೨) 27                           

೩)  ಆ ಕ್ರಮಾನುಗತ ಸಂಖ್ಯೆಗಳು  4, 5, 6 

 ೪) ಸೀರೆಯ ಬೆಲೆ 105 ರೂಪಾಯಿ

( ಇತರೇ ಇದೇ ರೀತಿಯ ಆಸಕ್ತಿಕರ ಸವಾಲುಗಳಿಗಾಗಿ ಶಕುಂತಲಾ ದೇವಿಯವರ Puzzles   to  puzzle  you  ”  ಪುಸ್ತಕವನ್ನು ನೋಡಿ )

         ಶಕುಂತಲಾ ದೇವಿಯವರು ಏಪ್ರಿಲ್ 21 , 2013 ರ ಭಾನುವಾರ ಬೆಳಿಗ್ಗೆ 8.15 ಕ್ಕೆ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.ಆಗ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅಂದು ಗಣಿತ ಲೋಕದ ಅನರ್ಘ್ಯ ರತ್ನವೊಂದು ಭಾರತೀಯ ಗಣಿತ ಮುಕುಟ ಮಣಿಯಿಂದ ಮರೆಯಾಗಿತ್ತು.      

              ಕೊನೆಯ ಸಮಯದಲ್ಲಿ ಶಕುಂತಲಾ ದೇವಿಯವರಿಗೆ ತಮ್ಮ ಹೆಸರಿನಲ್ಲಿ ಒಂದು ಯೂನಿವರ್ಸಿಟಿಯನ್ನು ಸ್ಥಾಪಿಸಬೇಕೆಂಬ ಹೆಬ್ಬಯಕೆ ಇತ್ತು. ಅದರ ಮೂಲಕ ಗಣಿತದ ಸೇವೆಯನ್ನು ಇನ್ನಷ್ಟು ಮಾಡಲು ಅವರು ಸಿಧ್ಧರಾಗಿದ್ದರು. ಆದರೆ ಅವರ ಜೀವಿತಾವಧಿಯಲ್ಲಿ ಅವರ ಬಯಕೆ ಕೈಗೂಡಲಿಲ್ಲ. ಆದರೂ ಗಣಿತ ಕ್ಷೇತ್ರದಲ್ಲಿ ಅವರು ಛಾಪು ಮೂಡಿಸಿದ ರೀತಿ ಅನನ್ಯ ಹಾಗೂ ಅವಿಸ್ಮರಣೀಯ . ಗಣಿತ ವಿಷಯವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಸದಾ ಪ್ರೇರಕ ಶಕ್ತಿಯಾಗಿ ನಿಲ್ಲುವ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಗಣಿತ ಆಸಕ್ತರಿಗೆ ಸದಾ ಹೊಳೆಯುವ ವಜ್ರವೇ ಸರಿ. 

* * * 


ನಾವು ಕಾಣದ ಸತ್ಯೇಂದ್ರನಾಥ್ ಬೋಸ್

ಲೇಖಕರು : ಎಸ್ ಹರ್ಷ

ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಡತಲೆ, ನಂಜನಗೂಡು ತಾ., ಮೈಸೂರು

   

ವಿಕಿರಣಗಳ ವರ್ತನೆಗಳನ್ನು ವಿವರಿಸಲು ‘ಬೋಸ್ ಸಂಖ್ಯಾಶಾಸ್ತ್ರ’ ಎಂಬ ಹೊಸ ನಮೂನೆಯ ಸಂಖ್ಯಾಶಾಸ್ತ್ರವನ್ನು ಹುಟ್ಟು ಹಾಕಿದ ಮಹಾನ್ ಚೇತನವೇ ಸತ್ಯೇಂದ್ರನಾಥ್ ಬೋಸ್ (1ನೇ ಜನವರಿ, 1894 – 4ನೇ ಫೆಬ್ರವರಿ 1974). ಈ ಸಂಖ್ಯಾಶಾಸ್ತ್ರವನ್ನು ಅನುಸರಿಸುವ ಮೂಲ ಕಣಗಳನ್ನು ಬೋಸಾನ್ ಗಳೆಂದೇ ಪೌಲ್ ಡಿರಾಕ್ ರವರು ನಾಮಾಂಕಿತ ಮಾಡಿದರುಇಂದು ಪರಮಾಣು ರಚನೆಯ ಆದರ್ಶ ಮಾದರಿಯಲ್ಲಿ 5 ಬಗೆಯ ಬೋಸಾನ್ ಗಳನ್ನು ನಾವು ಕಾಣಬಹುದುಗ್ಲುಆನ್ (Gluon), W ಬೋಸಾನ್ (W Bosan), Z ಬೋಸಾನ್ (Z Bosan), ಫೋಟಾನ್ (Photon) ಮತ್ತು ಹಿಗ್ಸ್ ಬೋಸಾನ್ (Higgs Bosan). ಈ ಕಣಗಳನ್ನು ಬೋಸ್ ರವರು ಗುರುತಿಸದೇ ಇದ್ದರೂ ಅವರ ಹೆಸರಿನಲ್ಲೆ ಇಂದು ಕರೆಯಲಾಗುತ್ತಿದೆಏಕೆಂದರೆ ಈ ಕಣಗಳು ಬೋಸ್ ರವರು ನೀಡಿರುವ ಸಂಖ್ಯಾಶಾಸ್ತ್ರವನ್ನು ಅನುಸರಿಸುತ್ತವೆಇಷ್ಟು ಮಾತ್ರವಲ್ಲದೇ ಇಂದು ಬೋಸಾನ್ ಎಂಬುದು ವಿಜ್ಞಾನ ವಿಷಯದ ಒಂದು ಶಾಖೆಯೇ ಆಗಿರುವುದು ಇವರ ಕೊಡುಗೆಗೆ ವಿಜ್ಞಾನಕುಲವು ಸಲ್ಲಿಸಿದ ಗೌರವವೇ ಸರಿ.

ಬೋಸ್ ಒಬ್ಬ ಪ್ರತಿಭಾನ್ವಿತ ಶಿಕ್ಷಕರಾಗಿದ್ದುಕೆಲವೊಮ್ಮೆ ಕೆಲವು ಸಂಕೀರ್ಣ ಪರಿಕಲ್ಪನೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಅರ್ಥೈಸಲು ಸಾಧ್ಯವಾಗದಿದ್ದಾಗ ಮಾನಸಿಕವಾಗಿ ಪರಿತಪಿಸುತ್ತಿದ್ದಿದ್ದು ಅವರ ಶಿಕ್ಷಕ ವೃತ್ತಿಯ ಬದುಕಿನ ಸಮರ್ಪಣೆಯನ್ನು ತೋರಿಸುತ್ತದೆ. ‘ಪ್ಲಾಂಕ್ ನ ಕ್ವಾಂಟಮ್ ಸಿದ್ದಾಂತವನ್ನು ತಮ್ಮ ವಿದ್ಯಾರ್ಥಿಗಳಿಗೆ ವಿವರಿಸುವಾಗ ಇಂತಹ ಕಠಿಣ ಸಂದರ್ಭಗಳನ್ನು ಬಹುವಾಗಿ ಎದುರಿಸುತ್ತಿದ್ದರುಈ ಸಮಸ್ಯಗೆ ಪರಿಹಾರವನ್ನು ಹುಡುಕುವ ಸಲುವಾಗಿ ತಮ್ಮದೇ ಆದ ಶೈಲಿಯಲ್ಲಿ ‘ಪ್ಲಾಂಕ್ ರವರ ವಿಕಿರಣ ನಿಯಮವನ್ನು ಯಾವುದೇ ಆಕರ ಪುಸ್ತಕಗಳ ಸಹಾಯವಿಲ್ಲದೇ ಅರ್ಥೈಸಿಕೊಂಡು ಸೈದ್ಧಾಂತಿಕವಾಗಿ ವಿವರಿಸಿಜರ್ಮನಿಯಲ್ಲಿದ್ದ ಮ್ಯಾಕ್ಸ್ ಪ್ಲಾಂಕ್ ರವರಿಗೆ ಒಂದು ಪತ್ರವನ್ನು ಬರೆಯುತ್ತಾರೆಮೊದಲು ಈ ಪತ್ರವು ತಿರಸ್ಕರಿಸಲ್ಪಡುತ್ತದೆಕುಗ್ಗದ ಬೋಸ್ ರವರು ತಮ್ಮ ಸಂಶೋಧನೆಗಳನ್ನು ವಿಜ್ಞಾನ ಕ್ಷೇತ್ರದ ದಿಗ್ಗಜರ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ಕಾಣುವ ಆಲ್ಬರ್ಟ್ ಐನ್ ಸ್ಟೀನ್ ರವರಿಗೆ ‘ಪ್ಲಾಂಕ್ ನಿಯಮ ಮತ್ತು ಲೈಟ್ ಕ್ವಾಂಟಮ್ ಹೈಪಾಥಿಸಿಸ್’ ಪರಿಕಲ್ಪನೆಗೆ ಸಂಬಂಧಿಸಿದಂತೆ ಲೇಖನವೊಂದನ್ನು ಬರೆದು ಕಳುಹಿಸಿದ್ದರುಈ ಲೇಖನವನ್ನು ಬಹುವಾಗಿ ಮೆಚ್ಚಿಕೊಂಡ ಐನ್ ಸ್ಟೈನ್ ರವರುಇದನ್ನು ಜರ್ಮನ್ ಭಾಷೆಗೆ ಭಾಷಾಂತರಿಸಿ ಬೋಸ್ ರವರ ಪರವಾಗಿ ಅಂದಿನ ಕಾಲದ ಉತ್ತಮ ಭೌತಶಾಸ್ತ್ರ ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ಮಾಡುತ್ತಾರೆನಂತರದ ದಿನಗಳಲ್ಲಿ ಇವರ ಸಂಶೋಧನೆಯು ವಿಜ್ಞಾನದ ದಿಕ್ಕನ್ನೇ ಬದಲಾಯಿಸುತ್ತದೆ.  ಬೋಸ್ ರವರ ಕಲ್ಪನೆಯನ್ನು ತಮ್ಮ ಪರಮಾಣು ಅಧ್ಯಯನಗಳಲ್ಲಿ ಅಳವಡಿಸಿಕೊಂಡ ಐನ್ ಸ್ಟೈನ್ ರವರು ವಿಚಿತ್ರವೆನಿಸುವ ವಿದ್ಯಮಾನವೊಂದನ್ನು ಊಹಿಸುತ್ತಾರೆಅದುವೇ ವಸ್ತುವಿನ ಐದನೇ ಸ್ಥಿತಿ ಎಂದು ಕರೆಯಲ್ಪಡುವ ‘ಬೋಸ್-ಐನ್ ಸ್ಟೈನ್ ಕಂಡೆನ್ಸೇಟ್ಸ್’. ಇಂದು ಈ ಬೋಸ್ – ಐನ್ ಸ್ಟೈನ್ ಸಂಖ್ಯಾಶಾಸ್ತ್ರದ ಅನ್ವಯವು ಅನಂತವಾಗಿದೆ.

ಇಷ್ಟು ಮಾತ್ರವಲ್ಲದೇ ‘ಕ್ಷ-ಕಿರಣ ಕ್ರಿಸ್ಟಲೋಗ್ರಫಿ ಮತ್ತು ಥರ್ಮೋಲುಮಿನೆಸೆನ್ಸ್’ ನ ಮೇಲೆ ನಡೆಸಿದ ಪ್ರಾಯೋಗಿಕ ಕಾರ್ಯಗಳಿಗೆ ಬೋಸ್ ರವರು ಹೆಸರುವಾಸಿಯಾಗಿದ್ದಾರೆ.  ಗಣಿತ ಮತ್ತು ಭೌತಶಾಸ್ತ್ರ ಎರಡೂ ಕ್ಷೇತ್ರಗಳಲ್ಲೂ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಬೋಸ್ ರವರು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ವಿಶೇಷ ಸಾಧನೆಯನ್ನು ಸಾಧಿಸಿದ್ದಾರೆಫೆಲೋ ಆಫ್ ರಾಯಲ್ ಸೊಸೈಟಿ ಮತ್ತು ಭಾರತದ ಎರೆಡನೇ ಅತ್ಯುನ್ನ ಪ್ರಶಸ್ತಿಯಾದ ಪದ್ಮವಿಭೂಷಣವನ್ನೂ ಪಡೆದಿದ್ದಾರೆ.  

ಕೋಲ್ಕತ್ತಾದ ಬಂಗಾಳಿ ಮನೆತನವೊಂದರಲ್ಲಿ 6 ಸೋದರಿಯರೊಂದಿಗೆ ಏಕೈಕ ಮಗನಾಗಿ ಜನ್ಮತಾಳಿದ ಸತ್ಯೇಂದ್ರನಾಥ್ ಬೋಸ್ ರವರು ಕೋಲ್ಕತ್ತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಜಗದೀಶ್ ಚಂದ್ರ ಬೋಸ್ಶಾರದ ಪ್ರಸನ್ನ ದಾಸ್ ಮತ್ತು ಪ್ರಫುಲ್ಲಾ ಚಂದ್ರ ರೇ ರವರ ಶಿಷ್ಯನಾಗಿದ್ದು ಅವರಿಗೆ ಒಲಿದು ಬಂದ ಅದೃಷ್ಟವೇ ಸರಿತನ್ನ ವಿದ್ಯಾರ್ಥಿ ಜೀವನದಲ್ಲಿ ಎಲ್ಲಾ ಹಂತಗಳಲ್ಲೂ ಓದಿನಲ್ಲಿ  ಪ್ರಥಮ ಸ್ಥಾನವನ್ನೇ ಗಳಿಸುತ್ತಿದ್ದ ಬೋಸ್ ರವರು ತಮ್ಮ ಸಹಪಾಠಿಯಾದ ಭವಿಷ್ಯದ ಖಗೋಳವಿಜ್ಞಾನಿಯಾದ ಮೇಘನಾದ್ ಸಹಾರವರನ್ನು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಮಾಡುತ್ತಿದ್ದಿದ್ದು ವಿಶೇಷವಾದ ಸಂಗತಿಯಾಗಿದೆವೈಜ್ಞಾನಿಕ ಲೇಖನಗಳನ್ನು ಅರ್ಥಿಸಿಕೊಳ್ಳುವ ಉತ್ಸಾಹದಿಂದಾಗಿ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಕರಗತ ಮಾಡಿಕೊಂಡಿದ್ದ ಬೋಸ್ ರವರು ಮೇಘನಾದ್ ಸಹಾ ರೊಂದಿಗೆ ಸೇರಿ ಐನ್ ಸ್ಟೈನ್ ರವರ ಜರ್ಮನ್ ಭಾಷೆಯಲ್ಲಿ ಪ್ರಕಟಿಸಿದ್ದ ‘ಸಾಪೇಕ್ಷತಾ ಸಿದ್ಧಾಂತವನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿದ್ದರು.

ಬೋಸ್ ರವರ ಸಂಶೋಧನೆಗಳನ್ನು ಆಧಾರವಾಗಿಟ್ಟುಕೊಂಡು ನಂತರದ ಸಂಶೋಧನೆಗಳನ್ನು ಕೈಗೊಂಡ 7 ವಿಜ್ಞಾನಿಗಳಿಗೆ ನೊಬೆಲ್ ಪಾರಿತೊಷಕಗಳು ದೊರೆತಿವೆಆದರೆ ಮೂಲ ಕರ್ತೃವಾದ ಬೋಸ್ ರವರ ಹೆಸರನ್ನು ಹಲವು ಬಾರಿ ಸೂಚಿಸಿದರೂ ನೊಬೆಲ್ ಇವರಿಗೆ ಲಭಿಸಲೇ ಇಲ್ಲ ಎಂಬುದು ಒಂದು ಸೋಜಿಗದ ಸಂಗತಿಯೇ ಸರಿಆದರೆ ಈ ವಿಚಾರವಾಗಿ ಬೋಸ್ ರವರು ಎಂದೂ ಅಸಂತುಷ್ಟರಾಗಲಿಲ್ಲಬದಲಾಗಿ ‘ತನ್ನ ಯೋಗ್ಯತೆಗೆ ತಕ್ಕುದಾದ ಎಲ್ಲಾ ಬಗೆಯ ಮನ್ನಣೆಗಳು ದೊರೆತಿವೆ’ ಎಂದಷ್ಟೆ ಹೇಳುತ್ತಿದ್ದರುಬೋಸ್ ರವರು ಅಂದಿಗೂ,ಇಂದಿಗೂ ಮತ್ತು ಎಂದೆಂದಿಗೂ ಮಾದರಿಯೇ ಸರಿರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ಸತ್ಯೆಂದ್ರನಾಥ್ ಬೋಸ್ ರವರ ಸ್ಮರಣೆ ಎಲ್ಲರಿಗೂ ಪ್ರೇರಣೆಯಾಗಲೀ ಎಂಬುದೇ ಈ ಲೇಖನದ ಉದ್ದೇಶ. 

* * *


ಭಾರತದ ಮೊದಲ ಅಣುಬಾಂಬ್ ಕಾರ್ಯದ ರೂವಾರಿಡಾ|| ರಾಜಾ ರಾಮಣ್ಣ

ಲೇಖಕರು : ದೀಪಶ್ರೀ ಹೆಚ್ ಜಿ

ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಡತಲೆ, ನಂಜನಗೂಡು ತಾ., ಮೈಸೂರು


ನೆನಪಿನ ಪುಟಗಳಲ್ಲಿ ಅವಿತು ಕುಳಿತಿರುವ 1974 ರಲ್ಲಿ ಪೋಕ್ರಾನ್ ಎಂಬಲ್ಲಿ ನಡೆಸಿದ ಅಣು ಪರೀಕ್ಷೆಯನ್ನು ಮೆಲುಕು ಹಾಕುತ್ತಿದ್ದಂತೆ, ರಾಜಾ ರಾಮಣ್ಣ ಎಂಬ ಹೆಸರು ಭಿತ್ತರಗೊಳ್ಳುತ್ತದೆ.  ಹೌದುಭಾರತದ ಹೆಮ್ಮೆಯ ಕಾರ್ಯವಾದ ಮೊದಲ ಅಣುಬಾಂಬ್ ತಯಾರಿಕೆ  ಹಾಗೂ ಪರೀಕ್ಷಾ  ಕಾರ್ಯದ ಪ್ರಮುಖ ವ್ಯಕ್ತಿವಿಜ್ಞಾನಿ ರಾಜಾ ರಾಮಣ್ಣ, ಇವರು ನಮ್ಮ ಕರ್ನಾಟಕದವರೆಂದು ಹೇಳಿಕೊಳ್ಳಲು ನಿಜಕ್ಕೂ ಹೆಮ್ಮೆಯೆನಿಸುತ್ತದೆ. 1925 ಜನವರಿ 28 ರಂದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತಿಪಟೂರಿನ ಸಮೀಪದ ಹಳ್ಳಿಯಲ್ಲಿ ಜನಿಸಿದ ಇವರು ರಾಜಾ ರಾಮಣ್ಣ ಎಂಬ ಹೆಸರಿನಿಂದ ಜಗತ್ತಿಗೆ ಪರಿಚಯವಾಗಿ ಅಣ್ವಸ್ತ್ರ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಯನ್ನೇ ಮಾಡಿ, ಭಾರತಕ್ಕೆ ಹೆಮ್ಮೆಯ ಗರಿ ಮೂಡಿಸಿದರು.

ಇವರ ತಂದೆ ರಾಮಣ್ಣ, ತಾಯಿ ರುಕ್ಮಿಣಿ.  ಇವರ ಬಾಲ್ಯದ ವಿದ್ಯಾಭ್ಯಾಸವು ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ನಡೆಯಿತು.  ನಂತರದ ಕಾಲೇಜು ವಿದ್ಯಾಭ್ಯಾಸವು ಮದ್ರಾಸಿನ ಕ್ರಿಷ್ಚಿಯನ್ ಕಾಲೇಜಿನಲ್ಲಿ ನಡೆಯಿತು.  ಸಾಹಿತ್ಯ ಹಾಗೂ ಸಂಗೀತ ಇವರ ಆಸಕ್ತಿಯ ವಿಷಯಗಳು.  1947 ರಲ್ಲಿ ಮದ್ರಾಸಿನ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಬಿ.ಎಸ್ಸಿ ಪದವಿಯನ್ನು ಹಾಗೂ ಶಾಸ್ತ್ರೀಯ ಸಂಗೀತದಲ್ಲಿ ಬಿ. ಪದವಿಯನ್ನು ಪಡೆದರು.  ನಂತರ ಸ್ನಾತಕೋತ್ತರ ಪದವಿಗಾಗಿ ಬಾಂಬೆ ವಿಶ್ವವಿದ್ಯಾನಿಲಯಕ್ಕೆ ತೆರಳಿ, ಅಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರಲ್ಲದೇ, ಅವರ ಆಸಕ್ತಿದಾಯಕ ಕ್ಷೇತ್ರವಾದ ಸಂಗೀತದಲ್ಲೂ ಸ್ನಾತಕೋತ್ತರ ಪದವಿ ಪಡೆದರು. 

ನಂತರ 1952ರಲ್ಲಿ ಕಾಮನ್ ವೆಲ್ತ್ ಸ್ಕಾಲರ್ ಶೀಪ್ ಪಡೆದು ಪಿ.ಹೆಚ್.ಡಿ ವ್ಯಾಸಂಗಕ್ಕಾಗಿ ಲಂಡನ್ ಗೆ ತೆರಳಿದರು.  1954ರಲ್ಲಿ ಲಂಡನ್ ಕಿಂಗ್ಸ್ ಕಾಲೇಜಿನಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ  ಪಿ.ಹೆಚ್.ಡಿ ಪದವಿ ಪಡೆದರು.  ನಂತರದ ದಿನಗಳಲ್ಲಿ ರಷ್ಯಾದಿಂದ Atomic Energy Research Establishment ವಿಷಯದ ಅಧ್ಯಯನಕ್ಕಾಗಿ ಆಹ್ವಾನ ಬಂತು.  ಅಲ್ಲಿ ಅವರು Nuclear fuel cycle ಮತ್ತು  reactors designing ಗಳ ವಿಷಯದಲ್ಲಿ ವಿಶೇಷ ಪರಿಣಿತಿ ಪಡೆದರು.  ಅಲ್ಲಿ ಇಷ್ಟೆಲ್ಲಾ ಅಧ್ಯಯನಗಳ ಜೊತೆಯಲ್ಲಿ ತಮ್ಮ ಮನಸ್ಸಿಗೆ ಉಲ್ಲಾಸ ನೀಡುತ್ತಿದ್ದ ಸಂಗೀತದ ಬಗ್ಗೆಯೂ ಪಾಂಡಿತ್ಯ ಪಡೆದರು.  ಪ್ರತೀ ವಾರವೂ ಯುರೋಪಿಯನ್ ಸಂಗೀತ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರದ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ವಿಷಯಗಳು ಅವರ ಜೀವಮಾನದ ಆಸಕ್ತಿ ವಿಷಯಗಳಾಗಿ ಉಳಿದುಕೊಂಡವು.  ಭಾರತಕ್ಕೆ ಮರಳಿದ ನಂತರ ಸಂಗೀತ ಕಾರ್ಯಕ್ರಮಗಳನ್ನು ಸ್ವತಃ ನೀಡುತ್ತಿದ್ದರು. 

1947 ರಲ್ಲಿ ಜವಹಾರ್ ಲಾಲ್ ನೆಹರು ನೇತೃತ್ವದ ಸರ್ಕಾರದಲ್ಲಿ ನ್ಯೂಕ್ಲಿಯರ್ ಆಯುಧಗಳ ತಯಾರಿಕಾ ಕಾರ್ಯ ನಡೆಯುತ್ತಿತ್ತು.  ಇದರ ನೇತೃತ್ವ ವಹಿಸಿದ್ದವರು ಹೋಮಿ ಜಹಾಂಗೀರ್ ಬಾಬಾ.  ಪಿ.ಹೆಚ್.ಡಿ ಪದವಿಯ ನಂತರ ರಾಜಾ ರಾಮಣ್ಣನವರು ಬಾಬಾ ಆಟೋಮಿಕ್ ರೀಸರ್ಚ್ ಸೆಂಟರ್ (BARC) ನಲ್ಲಿ ಉನ್ನತ ತಂತ್ರಜ್ಞನಾಗಿ ಸೇರಿ, ಹೋಮಿ ಜೆ ಬಾಬಾ ಜೊತೆಯಲ್ಲಿ ಅಣುಬಾಂಬ್ ತಯಾರಿಕೆ ಕಾರ್ಯದಲ್ಲಿ ಕೈ ಜೋಡಿಸಿದರು. 

ಬಾಬಾರವರು ಆಯುಧಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದರೆ, ರಾಜಾರಾಮಣ್ಣರವರು ಆಯುಧಗಳ ಪರೀಕ್ಷಾಕಾರ್ಯದಲ್ಲಿ ನಿರತರಾದರು.  ಇವರುಗಳ ಸತತ ಪರಿಶ್ರಮದಿಂದ ಕಾರ್ಯವು ಜಾಗೃತಿಯಲ್ಲಿದ್ದಾಗಲೇ, ದುರಾದೃಷ್ಟವಶಾತ್, 1966 ರಲ್ಲಿ ವಿಮಾನ ದುರಂತದಲ್ಲಿ ಬಾಬಾರವರು ನಿಧನರಾದರು.  ಅವರ ನಂತರ ರಾಜಾ ರಾಮಣ್ಣರವರು ಕಾರ್ಯದ ಮುಖ್ಯ ನಿರ್ದೇಶಕರಾಗಿ ಪ್ರಭಾರವಹಿಸಿಕೊಂಡರು.  ನಂತರ 1970 ವೇಳೆಗೆ ಇವರ ಮಾರ್ಗದರ್ಶನದಲ್ಲಿ ಭಾರತದ ಮೊದಲ ಅಣ್ವಸ್ತ್ರ ಸಾಧನವನ್ನು ಅಭಿವೃದ್ಧಿಪಡಿಸಲಾಯಿತು.  ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಮೌಖಿಕ ಆದೇಶದ ಮೇರೆಗೆ 1974ರಲ್ಲಿ ಆಯುಧದ ಅಣಕು ಪರೀಕ್ಷೆಗೆ ತೀರ್ಮಾನಿಸಲಾಯಿತು.  ಸ್ವತಃ ರಾಜಾ ರಾಮಣ್ಣನವರು ಪೋಕ್ರಾನ್ ಗೆ ಭೇಟಿ ನೀಡಿ ಅಣ್ವಸ್ತ್ರ ಪರೀಕ್ಷೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು.  ಪರೀಕ್ಷೆಯ ಹಿಂದಿನ ದಿನವಾದ ಮೇ 17 ನೇ ತಾರೀಖು ಅಣ್ವಸ್ತ್ರ ಸಾಧನವನ್ನು ಭೂಮಿಯೊಳಗೆ 100 ಮೀಟರ್ ಆಳದಲ್ಲಿ ಹುದುಗಿಸಿಡಲಾಯಿತು.  18ನೇ ತಾರೀಖು ಮುಂಜಾನೆ, ‘Smiling Buddha’ ಎನ್ನುವ ಹೆಸರಿನ ಸಣ್ಣ ಅಣ್ವಸ್ತ್ರ ಸಾಧನದ ಪರೀಕ್ಷೆಯನ್ನು ಯಶಸ್ಷಿಯಾಗಿ ನಡೆಸಲಾಯಿತು.  ಸ್ಪೋಟದಲ್ಲಿ ಸ್ಪೋಟಕವು ಸುಮಾರು 200 ಮೀಟರ್ ಎತ್ತರದವರೆಗೂ ಚಿಮ್ಮಿತು.  ಅದರ ಅವಶೇಷಗಳು ಬೆಟ್ಟದ ಆಕೃತಿಯಲ್ಲಿ ಬಿದ್ದವು.  ಇವೆಲ್ಲವೂ ಬಹಳ ಗೌಪ್ಯವಾಗಿಯೇ ನಡೆಯಿತಾದರೂ, ಮುಂದಿನ ದಿನಗಳಲ್ಲಿ ಇಂದಿರಾ ಗಾಂಧಿ, ರಾಜಾ ರಾಮಣ್ಣ ಮತ್ತು ಹೋಮಿ ಜೆ ಬಾಬಾ ರವರ ಭಾವಚಿತ್ರಗಳೊಡನೆ ಅಣ್ವಸ್ತ್ರ ಸಾಧನದ ಅಣಕು ಪರೀಕ್ಷೆಯ ವಿಷಯವು ದಿನಪತ್ರಿಕೆಗಳಲ್ಲಿ ಭಿತ್ತರವಾಯಿತು.   ರೇಡಿಯೋ ಕಾರ್ಯಕ್ರಮದ ಸಂದರ್ಶನವೊಂದರಲ್ಲಿ, ‘ಸ್ಪೋಟವು ದೊಡ್ಡ ಭೂಕಂಪದ ಅನುಭವವನ್ನು ಉಂಟುಮಾಡಿತುಎಂದು ಸ್ವತಃ ರಾಜಾ ರಾಮಣ್ಣನವರೇ ಹೇಳಿದ್ದಾರೆ, ಅಲ್ಲದೇ, ‘ ಪರೀಕ್ಷಾ ಪ್ರಯೋಗವು ಸಂಪೂರ್ಣ ಭೌತಶಾಸ್ತ್ರದ ತತ್ವವನ್ನು ಆಧರಿಸಿದೆಯೇ ಹೊರತು, ಇದಕ್ಕೆ ಯಾವುದೇ ಪೂಜೆ ಮಾಡುವುದು, ತೆಂಗಿನಕಾಯಿ ಒಡೆಯುವುದು, ರಾಹುಕಾಲ, ಗುಳಿಕಕಾಲ ನೋಡುವಂತಹ ಮೂಢನಂಬಿಕೆಗಳ ಅಗತ್ಯವಿಲ್ಲಎಂದೂ ಸಹ ಹೇಳಿದ್ದಾರೆ. 

  ಸಾಧನೆಗಾಗಿ ರಾಜಾ ರಾಮಣ್ಣರವರು 1975ರಲ್ಲಿ ಇಂದಿರಾ ಗಾಂಧಿ ಸರ್ಕಾರದಿಂದ ಭಾರತದ ಎರಡನೇ ಅತ್ಯುನ್ನತ ನಾಗರೀಕ ಸೇವಾ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಭಾಜನರಾದರು. 

ಇವರ ಮುಂದಿನ ವೃತ್ತಿ ಬದುಕಿನಲ್ಲಿ, 1978ರಲ್ಲಿ ಇರಾಕಿಗೆ ಬರುವಂತೆ ಸದ್ದಾಂ ಹುಸೇನ್ ರಿಂದ ಆಹ್ವಾನ ಬಂದಿತು.  ಅವರ ಆಹ್ವಾನಕ್ಕೆ ಓಗೊಟ್ಟು, ಇರಾಕ್ ಗೆ ತೆರಳಿ ಅಲ್ಲಿ ಕೆಲವು ವಾರಗಳ ಕಾಲ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಸದ್ದಾಂ ರವರು ಒಮ್ಮೆ ರಾಜಾ ರಾಮಣ್ಣನವರನ್ನು ತಮ್ಮ ಕಛೇರಿಗೆ ಕರೆಸಿ, ‘ನಿಮ್ಮ ದೇಶಕ್ಕಾಗಿ ನೀವು ದುಡಿದದ್ದು ಸಾಕು, ಇರಾಕ್ ದೇಶಕ್ಕಾಗಿ ದುಡಿಯಿರಿ, ತಾವು ಬಯಸಿದಷ್ಟು ವೇತನ ನೀಡುವುದಾಗಿ ಆಮಿಷ ಒಡ್ಡಿದನು. ಈ ಮಾತುಗಳು ರಾಜಾ ರಾಮಣ್ಣ ನವರಿಗೆ ಸಿಡಿಲೆರಗಿದಂತಾಯಿತು.  ರಾತ್ರಿ ದಿಗಿಲಿನಿಂದಲೇ ನಿದ್ದೆ ಬಾರದೆ ಕಳೆದರು.  ಮರುದಿನ ಬೆಳಿಗ್ಗೆಯೇ ಮಾತೃಭೂಮಿಗೆ ಪ್ರಯಾಣ ಬೆಳೆಸಿದರು. 

ಮುಂದಿನ ತಮ್ಮ ವೃತ್ತಿ ಜೀವನದಲ್ಲಿ ಅಣುಬಾಂಬ್ ಗಳ ದುರ್ಬಳಕೆಯಾಗದಂತೆ ಕಠಿಣ ಕ್ರಮಗಳನ್ನು ರೂಪಿಸಿದರು.  ನಂತರದ ದಿನಗಳಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿ, ಅಂತರಾಷ್ಟ್ರೀಯ ಭೌತಶಾಸ್ತ್ರದ ಸಮಾವೇಶದಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್ ವಿಷಯದಲ್ಲಿ ಉಪನ್ಯಾಸ ನೀಡಿದರು, ಜೊತೆಗೆ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಸುವಂತೆ ಶ್ರಮಿಸಿದರು. 

1980ರಲ್ಲಿ ಭಾರತದ ಪ್ರತಿಷ್ಟಿತ ಸಂಸ್ಥೆಯಾದ D.R.D.O. (Defense Research and Development Organization) ನಲ್ಲಿ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು.  1990 ವಿ.ಪಿ. ಸಿಂಗ್ ನೇತೃತ್ವದ ಸರ್ಕಾರದಲ್ಲಿ ಭಾರತದ ರಕ್ಷಣಾದಳಕ್ಕೆ ವೈಜ್ಞಾನಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.  1997ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು.  ಇವರ ಎಲ್ಲಾ ಸಾಧನೆಗೆ ಭಾರತ ಸರ್ಕಾರವು 1968 ರಲ್ಲಿ ಪದ್ಮಶ್ರೀ, 1973ರಲ್ಲಿ ಪದ್ಮಭೂಷಣ ಮತ್ತು 1975ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಿದೆ.  2004ರಲ್ಲಿ, ಇವರ 79ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಕೊನೆಯುಸಿರೆಳೆದರು. 


* * * 

ಗುರು-ಶಿಷ್ಯ ಪರಂಪರೆ

ಲೇಖಕರು : ಎಸ್ ಹರ್ಷ

ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಡತಲೆ, ನಂಜನಗೂಡು ತಾ., ಮೈಸೂರು


ಗುರುರ್ಬ್ರಹ್ಮ ಗುರು ವಿಷ್ಣು ಗುರುರ್ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ

ಭಾವಾರ್ಥ : ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರನು, ಪರಬ್ರಹ್ಮ ಸ್ವರೂಪನಾದ ಗುರುವೇ ಸರ್ವಸ್ವನು.


ವಿಶ್ವದ ಪ್ರತಿಯೊಂದು ವಸ್ತುವಿನ ಮೂಲ ಕಣವೇ ಪರಮಾಣು. ಕಣ್ಣಿಗೆ ಕಾಣದ ಈ ಪರಮಾಣುವನ್ನು ಊಹಿಸುವುದೇ ಸೂಕ್ತ ಎಂದು ಕೊಂಡಿರುವಾಗ, ಇದರೊಳಗೆ ಅಡಗಿರುವ ಮೂರು ಅತ್ಯಾತೀತ ಸೂಕ್ಷ್ಮ ಕಣಗಳಾದ ಪ್ರೋಟಾನ್, ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಗಳನ್ನು ಕಾಣದಿದ್ದರೂ ಕಂಡ ಹಾಗೆ ಭಾವಿಸುವುದು ಕಷ್ಟಾಸಾಧ್ಯ. ಈ ಮೂರು ಅಂಶಗಳನ್ನು ಪತ್ತೆ ಹಚ್ಚಿದ ಮೂರು ದಿಗ್ಗಜರ ಸಂಬಂಧವೇ ಈ ಲೇಖನ. ಎಲೆಕ್ಟ್ರಾನ್ ಇರುವಿಕೆಯನ್ನು ಸ್ಪಷ್ಟಪಡಿಸಿದ ಜೆ.ಜೆ.ಥಾಮ್ಸನ್,  ಪ್ರೋಟಾನ್ ಪತ್ತೆಹಚ್ಚಿದ ಅರ್ನೆಸ್ಟ್ ರುಧರ್ ಫೋರ್ಡ್ ಹಾಗೂ ನ್ಯೂಟ್ರಾನ್ ಗುರುತು ಹಿಡಿದ ಸರ್ ಜೇಮ್ಸ್ ಚಾಡ್ವಿಕ್ - ಈ ಮೂರು ವಿಜ್ಞಾನಿಗಳ ನಡುವಿನ ಸಂಬಂಧವು ಅಪರೂಪದ ಗುರು-ಶಿಷ್ಯ ಪರಂಪರೆಗೆ ಸಾಕ್ಷಿಯಾಗಬಹುದು ಎಂದು ಯಾರು ತಾನೆ ಊಹಿಸಿಯಾರು?

ಕ್ಯಾಥೋಡ್ ಕಿರಣಗಳ ಅಧ್ಯಯನವನ್ನು ಕೈಗೊಂಡಿದ್ದ ಜೆ ಜೆ ಥಾಮ್ಸನ್ 1897 ರಲ್ಲಿ ಎಲೆಕ್ಟ್ರಾನ್ ಇರುವಿಕೆಯನ್ನು ಪತ್ತೆಹಚ್ಚಿದನು. ಈ ಸಾಧನೋತ್ತರವಾಗಿ ಥಾಮ್ಸನ್ ಗೆ 1905ರಲ್ಲಿ ನೊಬೆಲ್ ಪಾರಿತೋಷಕವು ಲಭಿಸಿತು.

ಎಲೆಕ್ಟ್ರಾನ್ ಇರುವಿಕೆಯ ಗುರುತಿಸುವಿಕೆಯೇ ಒಂದು ಮೈಲಿಗಲ್ಲು ಎಂದುಕೊಂಡಿರುವಾಗಲೇ, 1917 ರಲ್ಲಿ ಅರ್ನೆಸ್ಟ್ ರುಧರ್ ಫೋರ್ಡ್ ತನ್ನ ಪ್ರಯೋಗಗಳ ಮೂಲಕ ನೈಟ್ರೋಜನ್ ಪರಮಾಣುವಿನಲ್ಲಿ ಹೈಡ್ರೋಜನ್ ನ್ಯೂಕ್ಲಿಯಸ್ (ಪ್ರೋಟಾನ್) ನ ಇರುವಿಕೆಯನ್ನು ಪತ್ತೆಹಚ್ಚಿದನು. ಪ್ರತಿಯೊಂದು ಪರಮಾಣುವಿನಲ್ಲಿ ಹೈಡ್ರೋಜನ್ ನ ನ್ಯೂಕ್ಲಿಯಸ್ (ಪ್ರೋಟಾನ್) ಅಡಗಿರುತ್ತದೆ ಎಂದು ಸಾಧಿಸಿದನು. ನಂತರದ ದಿನಗಳಲ್ಲಿ ಈ ಹೈಡ್ರೋಜನ್ ನ ನ್ಯೂಕ್ಲಿಯಸ್, ಪ್ರೋಟಾನ್ ಎಂದು ಕರೆಯಲ್ಪಟ್ಟಿತು. ಇಷ್ಟು ಮಾತ್ರವಲ್ಲದೇ 1920ನೇ ಇಸವಿಯಲ್ಲಿ ಈತನು ನ್ಯೂಟ್ರಾನ್ ನ ಇರುವಿಕೆಯ ಸೈದ್ಧಾಂತಿಕ ಸುಳಿವನ್ನು ನೀಡಿದ್ದನು.

ರುಧರ್ ಫೋರ್ಡ್ ನ ಸೈದ್ಧಾಂತಿಕ ಸುಳಿವಿನ ಅನುಸಾರ ಅರಸಿ ಹೊರಟ ಬ್ರಿಟಿಷ್ ಭೌತ ಶಾಸ್ತ್ರಜ್ಞನಾದ ಜೇಮ್ಸ್ ಚಾಡ್ವಿಕ್ ತನ್ನ ಪ್ರಯೋಗದಲ್ಲಿ ಪ್ರೋಟಾನಿನಷ್ಟೇ ಅಂದಾಜು ದ್ರವ್ಯರಾಶಿಯನ್ನು ಹೊಂದಿರುವ ನ್ಯೂಟ್ರಾನಿನ ಇರುವಿಕೆಯ ಸೈದ್ಧಾಂತಿಕ ಸುಳಿವನ್ನು 1932 ರಲ್ಲಿ ಪ್ರಾಯೋಗಿಕವಾಗಿ ಸ್ಪಷ್ಟಪಡಿಸಿದನು. ಈ ಸಾಧನೆಗೆ ಪ್ರತಿಫಲವಾಗಿ 1935ರಲ್ಲಿ ನೊಬೆಲ್ ಪಾರಿತೋಷಕವನ್ನು ಅಲಂಕರಿಸಿದನು. ಇಷ್ಟೆಲ್ಲಾ ಸಾಧನೆಗಳು ಈಗಾಗಲೇ ವೈಜ್ಞಾನಿಕ ಇತಿಹಾಸದ ಪುಟಗಳನ್ನು ಸೇರಿವೆ. ಶಿಕ್ಷಕರ ದಿನಾಚಣೆಯ ಸಂದರ್ಭದಲ್ಲಿ ಈ ವೈಜ್ಞಾನಿಕ ಸಂಶೋಧನೆಗಳ ಮಾಹಿತಿಯ ಔಚಿತ್ಯವೆನಿತ್ತು? ಎಂಬುದೇ ಈ ಲೇಖನದ ಸ್ವಾರಸ್ಯಕರ ಸಂಗತಿಯಾಗಿದೆ.

ಈ ಸಾಧನೆಗಳ ಪರ್ವದಲ್ಲಿ ಹಾದು ಹೋದ ಈ ಮೂರು ವಿಜ್ಞಾನಿಗಳ ನಡುವಿನ ಸಂಬಂಧವನ್ನು ಪರಿಚಯಿಸುವುದೇ ಈ ಲೇಖನದ ಉದ್ದೇಶವಾಗಿದೆ. ನ್ಯೂಜಿಲ್ಯಾಂಡಿನಲ್ಲಿ ಜನಿಸಿದ ಅರ್ನೆಸ್ಟ್ ರುಧರ್ ಫೋರ್ಡ್ 1895ರಲ್ಲಿ ರೀಸರ್ಚ್ ಫೆಲೋಶಿಪ್ ಪಡೆದ ನಂತರ ಇಂಗ್ಲೆಂಡಿನ ಕ್ರೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿ ಅಧ್ಯಯನವನ್ನು ಕೈಗೊಳ್ಳುವ ಸದಾವಕಾಶವನ್ನು ಗಿಟ್ಟಿಸಿಕೊಂಡನು. ಕ್ರೇಂಬ್ರಿಡ್ಜ್ ವಿಶ್ವವಿದ್ಯಾನಿಲಯೇತರ ವಿದ್ಯಾರ್ಥಿಯಾಗಿ ಮೊದಲ ಬಾರಿಗೆ ಈ ಅವಕಾಶವನ್ನು ಗಳಿಸಿದ ಕೀರ್ತಿ ರುಧರ್ ಫೋರ್ಡ್ ಗೆ ಸಲ್ಲುತ್ತದೆ. ಕಾಕತಾಳೀಯವೆಂಬಂತೆ ಫೋರ್ಡ್ ಶಿಷ್ಯನಾಗಿದ್ದು ಬೇರಾರಿಗೋ ಅಲ್ಲಎಲೆಕ್ಟ್ರಾನ್ ಇರುವಿಕೆಯನ್ನು ಸ್ಪಷ್ಟಪಡಿಸಿದ ಜೆ.ಜೆ.ಥಾಮ್ಸನ್ ಗೆ …!

ಇಷ್ಟಕ್ಕೆ ಹುಬ್ಬೇರಿಸಿದರೆ ಹೇಗೆ? ನ್ಯೂಟ್ರಾನನ್ನು ಪತ್ತೆಹಚ್ಚಿದ ಜೇಮ್ಸ್ ಚಾಡ್ವಿಕ್, ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವಾಗ ಅರ್ನೆಸ್ಟ್ ರುಧರ್ ಫೋರ್ಡ್ ನ (ಪ್ರೋಟಾನಿನ ಇರುವಿಕೆಯನ್ನು ಪತ್ತೆಹಚ್ಚಿದವ) ಶಿಷ್ಯನಾಗಿದ್ದು ಮತ್ತೊಂದು ವಿಶೇಷ ಸಂಗತಿಯಾಗಿದೆ. ಈತನ ಮಾರ್ಗದರ್ಶನದಲ್ಲೇ 1913ನೇ ಇಸವಿಯಲ್ಲಿ ಚಾಡ್ವಿಕ್ ತನ್ನ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಂಡನು. ಮೊದಲ ಮಹಾಯುದ್ಧದ ತರುವಾಯ ರುಧರ್ ಫೋರ್ಡ್ ನ ಮಾರ್ದರ್ಶನದಲ್ಲಿ ಡಾಕ್ಟರೇಟ್ ಪದವಿಯನ್ನೂ ಗಳಿಸಿದನು.

ಈ ವಿಸ್ಮಯವನ್ನು ಅಂದಿಗೆ ಯಾರು ತಾನೆ ಊಹಿಸಲು ಸಾಧ್ಯವಾಗಿದ್ದಿತು? ಮುಂದೊಂದು ದಿನ ಎಲೆಕ್ಟ್ರಾನ್ ನ ಇರುವಿಕೆಯನ್ನು ಸ್ಪಷ್ಟಪಡಿಸಿದ್ದ ಜೆ.ಜೆ.ಥಾಮ್ಸನ್ ನ ಶಿಷ್ಯನಾಗಿ, ಪ್ರೋಟಾನ್ ಇರುವಿಕೆಯನ್ನು ಎತ್ತಿಹಿಡಿದ ಅರ್ನೆಸ್ಟ್ ರುಧರ್ ಫೋರ್ಡ್ ಹೊರಹೊಮ್ಮುತ್ತಾನೆಂದು! ಇಷ್ಟು ಸಾಲದೆಂಬಂತೆ ಶಿಷ್ಯನ ಶಿಷ್ಯನಾದ ಸರ್ ಜೇಮ್ಸ್ ಚಾಡ್ವಿಕ್, ನ್ಯೂಟ್ರಾನಿನ ಇರುವಿಕೆಯನ್ನು ಗುರುತಿಸುತ್ತಾನೆಂದು. ರಾಜವಂಶಗಳ ಪರಂಪರೆಯನ್ನು ಸಾಮಾನ್ಯವಾಗಿ ಕಾಣಬಲ್ಲ ನಮಗೆ ಇಂತಹ ವಿಜ್ಞಾನಿಗಳ ಗುರು-ಶಿಷ್ಯ ಪರಂಪರೆಯನ್ನು ಕಾಣುವುದು ಸೋಜಿಗದೊಂದಿಗೆ ಹೆಮ್ಮೆಯೂ ಹೌದು. ಈ ಗುರು-ಶಿಷ್ಯ ಪರಂಪರೆಯು ಮುಂದಿನ ಪೀಳಿಗೆಗೆ ಮಾದರಿಯಾಗಲಿ

* * *


ನೊಬೆಲಿಗರು ನೀಡಿದ ಕೊಡುಗೆ

ಲೇಖಕರು : ಎಸ್ ಹರ್ಷ

ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಡತಲೆ, ನಂಜನಗೂಡು ತಾ., ಮೈಸೂರು

 ( ಡಿಸೆಂಬರ್ – 2021 ರ ಶಿಕ್ಷಣವಾರ್ತೆಯಲ್ಲಿ ಪ್ರಕಟಗೊಂಡ ಲೇಖನ )

ಸ್ವೀಡನ್ ದೇಶದ ಸ್ಟಾಕ್ ಹೋಮ್ ನಗರದಲ್ಲಿರುವ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಘೋಷಿಸುವ ನೊಬೆಲ್ ಪಾರಿತೋಷಕದ 2021ನೇ ಸಾಲಿನ ಪಟ್ಟಿಯು ಈಗಾಗಲೇ ಹೊರಬಿದ್ದಿದೆ. ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪಾರಿತೋಷಕವನ್ನು ಈ ಬಾರಿ ಇಬ್ಬರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಅವರೇ ಬೆಂಜಮಿನ್ ಲಿಸ್ಟ್ ಮತ್ತು W.C.ಮ್ಯಾಕ್ಮಿಲನ್. ಇವರು ಅಭಿವೃದ್ಧಿಪಡಿಸಿದ ಅಸಿಮೆಟ್ರಿಕ್ ಆರ್ಗ್ಯನೋ  ಕೆಟಾಲಿಸಿಸ್ – Asymmetric Organo Catalysis (ಅಸಮ್ಮಿತ ಸಾವಯವ ಕ್ರಿಯಾವರ್ಧನೆ) ಎಂಬ ಸಂಶೋಧನೆಯಿಂದ ಮಾನವಕುಲಕ್ಕೆ ಆಗುವ ಪ್ರಯೋಜನವೇನು? ಎಂಬುದರ ಬಗ್ಗೆಯೇ ಈ ಲೇಖನ.

ಮೊದಲಿಗೆ ಕ್ಯಾಟಲಿಸಿಸ್ (ಕ್ರಿಯಾವರ್ಧನೆ) ಎಂದರೇನು? ಎಂಬುದನ್ನು ತಿಳಿಯೋಣ.   ಪ್ರತಿಯೊಂದು ರಾಸಾಯನಿಕ ಕ್ರಿಯೆಯು ಜರುಗುವಾಗ ತನ್ನದೇ ಆದ ವೇಗವನ್ನು ಹೊಂದಿರುತ್ತದೆ. ಈ ವೇಗವನ್ನು ಹೆಚ್ಚಿಸಲು ನಾವು ಹೆಚ್ಚುವರಿಯಾಗಿ ಆ ಕ್ರಿಯೆಯಲ್ಲಿ ಕ್ರಿಯಾವರ್ಧಕಗಳನ್ನು (ಕೆಟಲಿಸ್ಟ್) ಸೇರಿಸುತ್ತೇವೆ. (ಯಾವುದೇ ಒಂದು ರಾಸಾಯನಿಕ ಕ್ರಿಯೆಯ ಗತಿಯ ದರವನ್ನು ಹೆಚ್ಚಿಸುವ ವಸ್ತುವೇ ಕ್ರಿಯಾವರ್ಧಕ.) ಈ ರೀತಿಯಾಗಿ ಜರುಗುವ ಕ್ರಿಯೆಗೆ ಕ್ರಿಯಾವರ್ಧನೆ ಎನ್ನುತ್ತಾರೆ.

2000ನೇ ಇಸವಿಯವರೆಗೂ ಪ್ರಮುಖವಾಗಿ ಎರಡು ಬಗೆಯ ಕ್ರಿಯಾವರ್ಧನೆಗಳ ಬಗ್ಗೆ ನಾವು ಅರಿತಿದ್ದೆವು. ಅವುಗಳೆಂದರೆ ಲೋಹ - ಕ್ರಿಯಾವರ್ಧನೆ ಮತ್ತು ಕಿಣ್ವ ಕ್ರಿಯಾವರ್ಧನೆ. ಈ ಎರಡೂ ಬಗೆಯ ಕೆಟಲಿಸ್ಟ್ ಗಳು ರಾಸಾಯನಿಕ ಕ್ರಿಯೆಗಳ ಗತಿಯ ದರವನ್ನು ಹೆಚ್ಚಿಸುತ್ತಿದ್ದವು ಎಂಬುದೇನೋ ಸರಿ.  ಆದರೆ ಆ ಗತಿಯ ದರವು ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ ಎಂಬುದನ್ನು ಅರಿತಿದ್ದ ವಿಜ್ಞಾನಿಗಳು, ಕ್ರಿಯೆಗಳ ಈ ಗತಿಯ ದರವನ್ನು ಹೆಚ್ಚಿಸಲು ಮತ್ತಷ್ಟು ಪ್ರಯತ್ನಗಳನ್ನು ನಿರಂತರವಾಗಿ ಕೈಗೊಳ್ಳುತ್ತಲೇ ಬಂದಿದ್ದರು.

ರಾಸಾಯನಿಕ ಕ್ರಿಯೆಗಳ ಗತಿಯ ದರವನ್ನು ಹೆಚ್ಚಿಸಲು ಬಳಸುವ ಕಿಣ್ವಗಳಲ್ಲಿ ಅಮೈನೊ ಆಮ್ಲಗಳು ಕ್ರಿಯಾವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಅದರಲ್ಲಿದ್ದ ಎಲ್ಲಾ ಅಮೈನೋ ಆಮ್ಲಗಳು (Amino acids) ಕ್ರಿಯಾವರ್ಧಕಗಳಾಗಿ ವರ್ತಿಸುವುದಿಲ್ಲ.  ಈ ರೀತಿಯಾಗಿ ಕ್ರಿಯಾವರ್ಧನೆಯಲ್ಲಿ ಪಾಲ್ಗೊಳ್ಳದ ಅಮೈನೊ ಆಮ್ಲಗಳು ಕ್ರಿಯಾವರ್ಧನೆಯನ್ನು ಕುಂಠಿತಗೊಳಿಸುತ್ತವೆ. ಈ ಬಗೆಯ ಅಮೈನೊ ಆಮ್ಲಗಳನ್ನು ಗುರುತಿಸುವುದು ಅಗತ್ಯವಾಗಿತ್ತು.  ಮತ್ತೊಂದು ಬಗೆಯಲ್ಲಿ, ಲೋಹ -  ಕ್ರಿಯಾವರ್ಧಕಗಳನ್ನು ಬಳಸಿದಾಗ, ಕೆಲವೊಮ್ಮೆ ಅವು ವಿಷಕಾರಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಷ್ಟು ಮಾತ್ರವಲ್ಲದೇ ಕ್ರಿಯಾವರ್ಧನೆಗೆ ತಗಲುವ ವೆಚ್ಚವೂ ದುಬಾರಿಯಾಗಿತ್ತು. ಇಂತಹ ಅನಾನುಕೂಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ವಿಜ್ಞಾನಿಗಳು ಹೊಸ ಬಗೆಯ ರಾಸಾಯನಿಕ ಕ್ರಿಯಾವರ್ಧನೆ ಪ್ರಕ್ರಿಯೆಯನ್ನು ಹುಡುಕುತ್ತಿದ್ದರು. ಈ ನಿಟ್ಟಿನಲ್ಲಿ ಬೆಂಜಮಿನ್ ಲಿಸ್ಟ್ ಮತ್ತು ಡಬ್ಲ್ಯೂ. ಸಿ. ಮ್ಯಾಕ್ಮಿಲನ್ ವೈಯಕ್ತಿಕವಾಗಿ ತಮ್ಮದೇ ಆದ ಶೈಲಿಯಲ್ಲಿ ಸ್ವತಂತ್ರ ಸಂಶೋಧನೆಗಳನ್ನು ನಡೆಸುತ್ತಾ ಬಂದರು. ಇವರ ಸಂಶೋಧನೆಗಳ ಫಲವಾಗಿ ಮೂರನೇ ಬಗೆಯ ಕ್ರಿಯಾವರ್ಧನೆಯು ಹೊರಬಿದ್ದಿತ್ತು.
ಇದನ್ನೇ ಅವರು ಅಸಿಮೆಟ್ರಿಕ್ ಆರ್ಗ್ಯನೋ ಕೆಟಲಿಸಿಸ್ ಎಂದು ಕರೆದರು. ಈ ಬಗೆಯ ಅಸಮ್ಮಿತ ಕ್ರಿಯಾವರ್ಧನೆಯಲ್ಲಿ ಸಹಜವಾಗಿಯೇ ಸಮಪ್ರಮಾಣದಲ್ಲಿ ಉತ್ಪನ್ನದ ಎರಡು ಬಗೆಗಳು ಬರುವ ಬದಲು ಉತ್ಪನ್ನದ ಒಂದು ಬಗೆಯೇ ಹೆಚ್ಚಾಗಿರುವುದು ವಿಶೇಷ ಹಾಗೂ ಸಾವಯವ ಕ್ರಿಯಾವರ್ಧಕಗಳನ್ನು ಬಳಸಿದ್ದು ಮುಖ್ಯ ಶೋಧಗಳಾಗಿವೆ.

ಈ ಬಗೆಯ ಕ್ರಿಯಾವರ್ಧನೆಯಿಂದ  ನಮಗಾಗುವ ಪ್ರಯೋಜನವಾದರೂ ಏನು? ರಾಸಾಯನಿಕ ಕ್ರಿಯೆಗಳ ಗತಿಯ ದರವನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿತ್ತು. ಏಕೆಂದರೆ ಯಾವುದೇ ರಾಸಾಯನಿಕ ಕ್ರಿಯೆಗಳ ಗತಿಯು ಹೆಚ್ಚಾದಲ್ಲಿ, ಕಡಿಮೆ ಸಮಯದಲ್ಲಿ ನಮಗೆ ಹೆಚ್ಚಿನ ಪ್ರಮಾಣದಲ್ಲಿ   ಉತ್ಪನ್ನಗಳು ದೊರಕುವಂತಾಗುತ್ತದೆ. ಉತ್ಪನ್ನಗಳ ಪ್ರಮಾಣವು ಹೆಚ್ಚಾದಂತೆಲ್ಲಾ ದೇಶದ ಅಭಿವೃದ್ಧಿಯೂ ಸಾಧ್ಯ ಎಂಬುದನ್ನು ಹೇಳಬೇಕಿಲ್ಲ. ಉದಾಹರಿಸಿ ಹೇಳಬೇಕೆಂದರೆ, ಯಾವುದೇ ಔಷಧದ ತಯಾರಿಕೆಗಾಗಿ ಆಕ್ಟೀವ್ ಫಾರ್ಮಸೆಟಿಕಲ್ ಇನ್ ಗ್ರೇಡಿಯೆಂಟ್ಸ್ ( API ) ಗಳನ್ನು ಕಚ್ಛಾವಸ್ತುಗಳನ್ನಾಗಿ ಬಳಸಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಈ ಕಚ್ಛಾವಸ್ತುಗಳನ್ನು ಮತ್ತೊಬ್ಬರಿಂದ ಎರವಲು ಪಡೆಯುವ ಗೋಜಿಗೆ ಹೋಗದೆ ಅಸಿಮೆಟ್ರಿಕ್ ಆರ್ಗ್ಯನೋ ಕೆಟಲಿಸಿಸ್ ತಂತ್ರದ ಮೂಲಕ ನಾವೇ ತಯಾರಿಸಿಕೊಳ್ಳಬಹುದಾದ ಸ್ವಾವಲಂಬನೆಯನ್ನು ಹೊಂದಬಹುದಾಗಿದೆ. ಇದೇ ರೀತಿಯಲ್ಲಿ, ನಾವು ನಿತ್ಯಜೀವನದಲ್ಲಿ ಬಳಸುವ ಸೌರಕೋಶಗಳಲ್ಲಿಯೂ ಕ್ರಿಯಾವರ್ಧನೆಯು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಕೋಶಗಳಲ್ಲಿ ಬೆಳಕನ್ನು ಹೀರಿಕೊಳ್ಳುವ ಅಣುಗಳನ್ನು ಅಭಿವೃದ್ಧಿಪಡಿಸಲು ಈ ಬಗೆಯ ಅಸಮ್ಮಿತ ಸಾವಯವ ಕ್ರಿಯಾವರ್ಧನೆಯು ಪೂರಕವಾಗುತ್ತದೆ.

ಲೋಹ ಮತ್ತು ಕಿಣ್ವಗಳನ್ನು ಕ್ರಿಯಾವರ್ಧಕಗಳಾಗಿ ಬಳಸಿ ಪಡೆದುಕೊಂಡ ಉತ್ಪನ್ನಗಳು ನಂತರದಲ್ಲಿ ಬಹುಬೇಗನೆ ಹಾಳಾಗುತ್ತಿರುವುದನ್ನು ಗಮನಿಸಲಾಗಿತ್ತು. ಇದಕ್ಕೆ ಪರಿಹಾರವಾಗಿ ಸಣ್ಣ ಸಾವಯವ ಅಣುಗಳಿಂದ ಅಸಮ್ಮಿತ ಸಾವಯವ ಕ್ರಿಯಾವರ್ಧನೆಯನ್ನು ಕೈಗೊಳ್ಳಲಾಯಿತು. ಸಾವಯವ ಅಣುಗಳು ಸಾಮಾನ್ಯವಾಗಿ ಜೀವಿಗಳಲ್ಲಿ ಕಂಡುಬರುವ ಅಂಶಗಳಾಗಿವೆ.
ಇವುಗಳಲ್ಲಿ ಇಂಗಾಲವು ಇತರೆ ಧಾತುಗಳಿಗೆ ಬೆಸೆದುಕೊಂಡಿರುತ್ತದೆ. ಈ ಬಗೆಯಲ್ಲಿನ ಸಣ್ಣ ಅಣುಗಳಿಂದ ರಾಸಾಯನಿಕ ಕ್ರಿಯೆಯನ್ನು ವರ್ಧಿಸುವುದೇ ಅಸಮ್ಮಿತ ಸಾವಯವ ಕ್ರಿಯಾವರ್ಧನೆ ಎನ್ನಬಹುದು. ಈ ಆವಿಷ್ಕಾರವು ಮಾನವನಿಗೆ ಲಭಿಸಲಿರುವ ಮಹೋನ್ನತ ಆವಿಷ್ಕಾರವಾಗಿದೆ   ಎಂದರೆ ತಪ್ಪಾಗಲಾರದು. ಈ ದಿಶೆಯಲ್ಲಿ ಆವಿಷ್ಕಾರವನ್ನು ಕೈಗೊಂಡು ಯಶಸ್ವಿಯಾದ ಬೆಂಜಮಿನ್ ಲಿಸ್ಟ್ ಮತ್ತು ಡಬ್ಲ್ಯೂ. ಸಿ. ಮ್ಯಾಕ್ಮಿಲನ್ ವಿಜ್ಞಾನಿಗಳಿಗೆ ಜಾಗತಿಕ ಮಟ್ಟದಲ್ಲಿ ಅಭಿನಂದನೆಗಳು.

ಇಲ್ಲಿಯವರೆಗೂ ರಸಾಯನಶಾಸ್ತ್ರ ವಿಭಾಗದಲ್ಲಿ 113 ಬಾರಿ ನೋಬೆಲ್ ಪಾರಿತೋಷಕಗಳನ್ನು ನೀಡಲಾಗಿದೆ. ಇದರಲ್ಲಿ ಒಟ್ಟಾರೆಯಾಗಿ 188  ವಿಜ್ಞಾನಿಗಳು ಈ ಪಾರಿತೋಷಕವನ್ನು ಅಲಂಕರಿಸಿದ್ದಾರೆ. 113ರ ಪೈಕಿ 65 ವಿಜ್ಞಾನಿಗಳು ಯಾರೊಂದಿಗೂ ಹಂಚಿಕೊಳ್ಳದೇ ವೈಯಕ್ತಿಕವಾಗಿ ಪಾರಿತೋಷಕವನ್ನು ಪಡೆದಿದ್ದಾರೆ. 24 ಬಾರಿ ಇಬ್ಬರು ವಿಜ್ಞಾನಿಗಳಂತೆ ಹಾಗೂ 25 ಬಾರಿ 3 ವಿಜ್ಞಾನಿಗಳನ್ನೊಳಗೊಂಡಂತೆ ಪಾರಿತೋಷಕವನ್ನು ಹಂಚಿಕೊಂಡಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ
ಇವರಲ್ಲಿ ಫ್ರೆಡ್ರಿಕ್ ಜೂಲಿಯೆಟ್ ಕ್ಯೂರಿಯು ಅತ್ಯಂತ ಕಿರಿಯ ವಯಸ್ಸಿನಲ್ಲಿ (35) ನೊಬೆಲ್ ಪಾರಿತೋಷಕವನ್ನು ಅಲಂಕರಿಸಿದ್ದರೇ, ಜಾನ್ ಬಿ ಗುಡ್ ಎನಫ್ ಎಂಬ 97 ವಯಸ್ಸಿನ ವಿಜ್ಞಾನಿ ನೊಬೆಲ್ ಗಳಿಸಿದ ಹಿರಿಯ ವಿಜ್ಞಾನಿಯಾಗಿದ್ದಾರೆ.


* * *














1 comment: