ಗ್ರಾಮೀಣ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ನಮ್ಮ ಶಾಲೆಗೆ ಯಾವುದೇ ಬಗೆಯ ಸಹಕಾರ, ಪ್ರೋತ್ಸಾಹ ಹಾಗೂ ಸಂಪನ್ಮೂಲಗಳನ್ನು ನೀಡಬಹುದು.
ಸಂಪರ್ಕಿಸಿ: ಎಸ್. ಹರ್ಷ - 9972261802
ಅಂತರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನ ಅಳವಡಿಕೆ
ನಮ್ಮ ಶಾಲೆಯಲ್ಲಿ ಕೈಗೊಂಡಿರುವ
ಹಲವಾರು ತಂತ್ರಜ್ಞಾನಗಳ ಅನ್ವಯಗಳನ್ನು ಗಮನಿಸಿದ ಬೆಂಗಳೂರಿನ ವೈಸ್ (WISE) ಸಂಸ್ಥೆಯು ಎಲ್ಕಾಂ
ಕಂಪೆನಿಯ ಸಹಯೋಗದೊಂದಿಗೆ ಶಾಲೆಗೆ 7 ಲಕ್ಷ ರೂಪಾಯಿಗಳ ಮೊತ್ತದ ಪ್ರತಿಯೊಂದು ತರಗತಿಗೂ ಸೇರಿದಂತೆ 3
ಇಂಟೆರಾಕ್ಟಿವ್ ಪ್ಯಾನೆಲ್ ಬೋರ್ಡ್ ಗಳು, 3 ಲ್ಯಾಪ್ಟಾಪ್ ಗಳು ಮತ್ತು ಒಂದು ಕಲರ್ ಪ್ರಿಂಟರನ್ನು
ನೀಡಿದ್ದಾರೆ. ಜೊತೆಯಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಜೊತೆ ಸಮವಸ್ತ್ರವನ್ನು
ನೀಡಿದರು. ಶಾಲೆಯಲ್ಲಿ ಇಂದು ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞಾನವನ್ನು ಹಲವಾರು ತಂತ್ರಾಂಶಗಳ
ಅಳವಡಿಕೆಯ ಮೂಲಕ ಶಾಲೆಯಲ್ಲಿ ಬೋಧನೆಯನ್ನು ಕೈಗೊಳ್ಳಲಾಗಿದೆ.
ನಿರಂತರ ವಿದ್ಯುತ್ ಗಾಗಿ ಯು.ಪಿ.ಎಸ್.
ವಿದ್ಯುತ್ ಅಡಚಣೆಗಳಿಂದಾಗಿ ಹಲವಾರು ಸಂದರ್ಭಗಳಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾ
ಕಾರ್ಯವು ಮೊಟಕುಗೊಳ್ಳುವುದು ಸಾಮಾನ್ಯವಾಗಿತ್ತು. ಇಂತಹ ಅನಿವಾರ್ಯ ಸಮಯದಲ್ಲಿ ಸಮುದಾಯ
ಸಹಭಾಗಿತ್ವದ ಅಡಿಯಲ್ಲಿ ಪ್ರತೀ ವರ್ಷವೂ ನಮ್ಮ ಶಾಲೆಯ ಅಭಿವೃದ್ಧಿಗೆ ಅನುಕೂಲಿಸುವಂತಹ
ಸಾಧನಗಳನ್ನು ನೀಡುತ್ತಾ, ಪ್ರೋತ್ಸಾಹಿಸುತ್ತಿರುವ ಮೈಸೂರಿನ ಶ್ರೀಯುತ ನರೇಂದ್ರನಾಥ್ ರವರು 2022-23
ನೇ ಸಾಲಿನಲ್ಲಿ ರೂ. 21,000 ಮೌಲ್ಯದ 1.6kV ಸಾಮರ್ಥ್ಯದ ಯು.ಪಿ.ಎಸ್. ಸಾಧನವನ್ನು ಅನುದಾನವಾಗಿ
ನೀಡಿದ್ದಾರೆ.
With the support of Mr. Narendranath, Mysuru and Jagannath Rao, Hedathale, our school is now running with an uninterrupted power supply under the of worth Rs.21,000.
Published in the news paper Andolana (Mysuru edition)-09/06/2022
ಪ್ರೊಜೆಕ್ಟರ್
ಸಮುದಾಯ ಸಹಭಾಗಿತ್ವದ ಅಡಿಯಲ್ಲಿ ನಮ್ಮ ಶಾಲೆಯನ್ನು
ಅಭಿವೃದ್ಧಿಪಡಿಸಲು ಸಮಾಜದಿಂದ ಮತ್ತು ದಾನಿಗಳಿಂದ ಸಹಕಾರವನ್ನು ಪಡೆಯುವ ದಿಶೆಯಲ್ಲಿ ಮೈಸೂರಿನ
ಶ್ರೀಯುತ ನರೇಂದ್ರನಾಥ್ ರವರನ್ನು ಕೋರಿಕೊಂಡಾಗ, ನನ್ನ ಕೋರಿಕೆಯನ್ನು ಮನ್ನಿಸಿ, ಶಾಲೆಗೆ
2021ರಲ್ಲಿ 36,000 ರೂಪಾಯಿಗಳ ಬೆಲೆಯ ಪ್ರೊಜೆಕ್ಟರನ್ನು ವಿದ್ಯಾರ್ಥಿಗಳ ಕಲಿಕೆಗಾಗಿ
ನೀಡಿದ್ದಾರೆ.
Mr. Narendranath, Mysuru donated a Projector of worth Rs. 36,000
Published in the news paper Andolana (Mysuru edition)-12/01/2021
http://epaper.andolana.in/epaper.php?edn=Main&isid=ANDOLANABC_MAI_20210112&pid=ANDOLANABC_MAI#Page/7
ಪ್ರೀ ಲೋಡೆಡ್ ಸಂಪನ್ಮೂಲಗಳೊಂದಿಗೆ ದೊರೆತ ಟ್ಯಾಬ್ಲೆಟ್ ಗಳು
ನಂಜನಗೂಡಿನ ರೋಟರಿ ಸಂಸ್ಥೆಯು ನನ್ನ ಕೋರಿಕೆಯನ್ನು ಪರಿಗಣಿಸಿ, ಪಬ್ಲಿಕ್ ಟಿ ವಿ ಚಾನಲ್
ನ ಸಹಯೋಗದೊಂದಿಗೆ ಕೋವಿಡ್ ಸಂದರ್ಭದಲ್ಲಿ ರೂ. 80,000 ಮೌಲ್ಯದ 25 ಟ್ಯಾಬ್ಲೆಟ್ ಗಳನ್ನು ದೇಣಿಗೆಯಾಗಿ
ನೀಡಿದರು. ಇಂತಹ ಸಂದರ್ಭದಲ್ಲಿ ಆಫ್ ಲೈನ್ ತರಗತಿಗಳನ್ನು ನಡೆಸುವುದು ಅಸಾಧ್ಯವಾಗಿದ್ದರಿಂದ ಆನ್
ಲೈನ್ ತರಗತಿಗಳನ್ನು ನಡೆಸಲು ಈ ಟ್ಯಾಬ್ಲೆಟ್ ಗಳು ವರದಾನವಾದವು. ಪ್ರತೀ ಇಬ್ಬರು
ವಿದ್ಯಾರ್ಥಿಗಳಿಗೆ ಒಂದರಂತೆ ಟ್ಯಾಬ್ಲೆಟ್ ಗಳನ್ನು ನೀಡಿ, ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ
ಕುಳಿತು ಆನ್ ಲೈನ್ ತರಗತಿಗಳನ್ನು ವೀಕ್ಷಿಸಲು ಈ ಟ್ಯಾಬ್ಲೆಟ್ ಗಳು ವರದಾನವಾದವು.
ಸ್ಕ್ಯಾನರ್ ನ್ನೊಳಗೊಂಡ
ಪ್ರಿಂಟರ್
ನಾನು ಮತ್ತು ನನ್ನ ಸಹೋದ್ಯೋಗಿ ಮಿತ್ರರು ಸೇರಿ ಶಾಲೆಗೆಂದು ರೂ. 20,500 ಮೌಲ್ಯದ ಒಂದು ಪ್ರಿಂಟರನ್ನು ಖರೀದಿಸಿದೆವು. ಶಾಲಾ ಕಾರ್ಯಕ್ರಮಗಳ ಅನೇಕ ಚಟುವಟಿಕೆಗಳಿಗಾಗಿ ಇಂದು ಇದು ಬಹು ಉಪಯೋಗಿಯಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಸಂಬಂಧಿಸಿದ ಹಲವಾರು ಚಟುವಟಿಕಾ ಹಾಳೆಗಳನ್ನು ಪ್ರಿಂಟ್ ತೆಗೆಯಲು ಮತ್ತು ಸ್ಕ್ಯಾನ್ ಮಾಡಲು ಈ ಸಾಧನವನ್ನು ಉಪಯೋಗಿಸುತ್ತಿದ್ದೇವೆ.
ವೈ-ಫೈ
ತಂತ್ರಜ್ಞಾನ ಆಧಾರಿತ ಪ್ರಯೋಗಾಲಯ
ಧ್ವನಿವರ್ಧಕ
ಶಾಲೆಯಲ್ಲಿ ಜರುಗುವ ಹೊರಾಂಗಣ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿಭಾಯಿಸಲು ಅಗತ್ಯವಿರುವ
ಧ್ವನಿವರ್ಧಕವನ್ನು ಶಾಲೆಗೆ ಒದಗಿಸಿಕೊಡಬೇಕೆಂಬ ಸದುದ್ದೇಶದಿಂದ ಹೆಡತಲೆ ಮೂಲ ನಿವಾಸಿಗಳಿಂದ ರೂಪುಗೊಂಡಿರುವ
ಶ್ರೀ ರಂಗನಾಥಶಾಸ್ತ್ರಿ ಕೃಷ್ಣವೇಣಮ್ಮ ಮೆಮೊರಿಯಲ್ ಟ್ರಸ್ಟ್(ರಿ), ಹೆಡತಲೆ, ನಂಜನಗೂಡು, ಮೈಸೂರು
ಇವರ ಬಳಿ ಕೋರಿಕೆಯನ್ನು ಸಲ್ಲಿಸಿದಾಗ, ವೈಯಕ್ತಿಕ ಕೋರಿಕೆಯನ್ನು ಮನ್ನಿಸಿ, ತಮ್ಮ ಟ್ರಸ್ಟ್ ನ
ವತಿಯಿಂದ ರೂ. 21,000 ಮೌಲ್ಯದ ಅಹುಜಾ ಕಂಪೆನಿಯ ಧ್ವನಿವರ್ಧಕವನ್ನು 2022-23 ಶೈಕ್ಷಣಿಕ ಸಾಲಿನ
ಜೂನ್ ಮಾಹೆಯಲ್ಲಿ ಅನುದಾನವಾಗಿ ನೀಡಿದ್ದಾರೆ.
ಸ್ಮಾರ್ಟ್ ಟಿ.ವಿ.
ನಿರಂತರ ಕೋರಿಕೆಯ ಮೇರೆಗೆ ನಂಜನಗೂಡಿನ ಜುಬಿಲಿಯೆಂಟ್ ಫಾರ್ಮೋವಾ ಲಿಮಿಟೆಡ್ ಕಂಪೆನಿಯು
ನಮ್ಮ ಶಾಲೆಗೆ 55 ಇಂಚುಗಳ ಸ್ಮಾರ್ಟ್ ಟಿ.ವಿ. ಯೊಂದಿಗೆ ಪೂರಕ ಸಾಧನವಾಗಿ ಆಂಡ್ರಾಯ್ಡ್ ಸೆಟ್ ಅಪ್
ಬಾಕ್ಸ್ ಸಾಧನವನ್ನು ನೀಡಿದ್ದಾರೆ. ಇದರೊಳಗೆ ಪೂರ್ವ ರಚಿತ ಕಲಿಕಾ ಸಂಪನ್ಮೂಲಗಳನ್ನು ತುಂಬಿಸಲಾಗಿದೆ.
ಶಿಕ್ಷಕರ ಮೊಬೈಲಿನಿಂದ ಇಂಟರ್ನೆಟ್ ಸೇವೆಯನ್ನು
ಪಡೆಯುತ್ತಾ, ವಿದ್ಯಾರ್ಥಿಗಳು ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂಟರ್
ನೆಟ್ ಲಭ್ಯವಿಲ್ಲದ ಸಮಯದಲ್ಲಿ ವಿದ್ಯಾರ್ಥಿಗಳು ಆಂಡ್ರಾಯ್ಡ್ ಸೆಟ್-ಅಪ್ ಬಾಕ್ಸ್ ನಲ್ಲಿ ಲೋಡ್
ಆಗಿರುವ ಸಂಪನ್ಮೂಲಗಳನ್ನು ಉಪಯೋಗಿಸಿ ಸ್ವ-ಕಲಿಕೆಯಲ್ಲಿ ತೊಡಗುತ್ತಿದ್ದಾರೆ.
ಇಂಟರಾಕ್ಟಿವ್ ವೈಟ್ ಬೋರ್ಡ್
ಅತ್ಯಾಧುನಿಕ ತಂತ್ರಜ್ಞಾನವನ್ನು
ಹೊಂದಿರುವ ಇಂಟರಾಕ್ಟಿವ್ ವೈಟ್ ಬೋರ್ಡ್ ನೊಂದಿಗೆ ತರಗತಿಯಲ್ಲಿ ಬೋಧಿಸುವುದು ನನ್ನ ಬಹು ವರ್ಷಗಳ
ಕನಸಾಗಿತ್ತು. ಬಹುವೆಚ್ಚದ ಈ ಸಾಧನವನ್ನು ಕೈಗೆಟಕಿಸಿಕೊಳ್ಳುವುದು ಸುಲಭವೇನಿರಲಿಲ್ಲ. ಈ ದಿಶೆಯಲ್ಲಿ
ಪ್ರಯತ್ನಿಸಿದ ನಮಗೆ ಇನ್ಫೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಯುವ ಅನ್ ಸ್ಟಾಪೆಬಲ್ ಎಂಬ ಸಂಸ್ಥೆಯೊಂದು
ನಮ್ಮ ಶಾಲೆಗೆ ಅಂದಾಜು ರೂ 2 ಲಕ್ಷ ಮೌಲ್ಯದ ಇಂಟರಾಕ್ಟಿವ್ ವೈಟ್ ಬೋರ್ಡ್ ನೊಂದಿಗೆ
ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಇಂದು ಪ್ರತಿಯೊಂದು ತರಗತಿಯು
ಈ ಇಂಟರಾಕ್ಟಿವ್ ವೈಟ್ ಬೋರ್ಡ್ ನೊಂದಿಗೆ ಜರುಗುತ್ತಿದ್ದು, ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಳು
ಪರಿಣಾಮಕಾರಿ ಮತ್ತು ಆಸಕ್ತಿದಾಯಕವಾಗಿವೆ. ಈ ಪರಿಯಲ್ಲಿ ಇಂದು ನನ್ನ ಕನಸು ನನಸಾಗಿದೆ.
No comments:
Post a Comment